ಯಾರಿ ಹೈ ಇಮಾನ್..ಮೇರಾ..

7

ಯಾರಿ ಹೈ ಇಮಾನ್..ಮೇರಾ..

Published:
Updated:
ಯಾರಿ ಹೈ ಇಮಾನ್..ಮೇರಾ..

`ಜಂಜೀರ್~ ಚಿತ್ರದ `ಯಾರೀ ಮೇರಿ ಇಮಾನ್ ಮೇರಾ ಯಾರ್ ಮೇರಿ ಜಿಂದಗಿ...~ ಹಾಡು, ಅಮಿತಾಬ್‌ಗಿಂತಲೂ ಖ್ಯಾತಿಯಾಗಿತ್ತು.ಪಠಾಣನ ಪಾತ್ರದಲ್ಲಿದ್ದ ಪ್ರಾಣ್ ಸಹ ಈ ಹಾಡಿನೊಂದಿಗೆ ನೆನಪಾಗದೇ ಇರಲಾರರು. ಹಿಂದಿ ಚಿತ್ರ ರಂಗದ ಹೆಸರಾಂತ ಖಳರಲ್ಲಿ ಒಬ್ಬರಾದ ಪ್ರಾಣ್ ತಮ್ಮ ಯಾರ್ ಕಲಾಕಾರ ಅಮಿತಾಬ್‌ಗೆ ಇತ್ತೀಚೆಗೆ ಕರೆಮಾಡಿದ್ದರಂತೆ.82 ವರ್ಷದ ಈ ಹಿರಿಯಜ್ಜ, ಅಮಿತಾಬ್‌ಗೆ ಕರೆ ಮಾಡಿ, `ಸುಮ್ಮನೆ ನಿನ್ನ ಧ್ವನಿ ಕೇಳಬೇಕೆನಿಸಿತ್ತು~ ಎಂದವರೇ ಫೋನು ಇಟ್ಟರಂತೆ.  ಹೀಗೆ ಅಮಿತಾಬ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಪ್ರಾಣ್ ಕೇವಲ ವಜ್ರಕಠಿಣ ಧ್ವನಿಯ ಕ್ರೂರ ಪಾತ್ರಗಳನ್ನು ನಿರ್ವಹಿಸುವ ನಟರಾಗಿ ಎಲ್ಲರಿಗೂ ಗೊತ್ತು.

 

ಆದರೆ ಅವರಲ್ಲೊಬ್ಬ ಕೋಮಲ ಮನಸಿನ ಕವಿ ಇದ್ದಾನೆ. ತುಂಟ ಮನಸಿನ ಹಾಸ್ಯಪ್ರಜ್ಞೆಯುಳ್ಳ ಆಸಕ್ತಿಕರ ವ್ಯಕ್ತಿತ್ವವೂ ಅವರದ್ದು. ಅವರೊಂದಿಗೆ ನಟಿಸಿರುವ ಎಲ್ಲ ಚಿತ್ರಗಳಲ್ಲಿಯೂ ಆನಂದದಿಂದ ಸಮಯವನ್ನು ಕಳೆದಿದ್ದೇವೆ. ಪ್ರಾಣ್‌ಗೆ ಗಣಿತವೆಂದರೂ ಪ್ರಾಣವಾಗಿತ್ತಂತೆ.ಎಷ್ಟೇ ದೊಡ್ಡ ಲೆಕ್ಕಾಚಾರ ನೀಡಿದರೂ ಬಾಯಿಲೆಕ್ಕ ಮಾಡಿ ಉತ್ತರವನ್ನು ಹೇಳುತ್ತಿದ್ದರಂತೆ. `ಅಮರ್ ಅಕ್ಬರ್ ಆಂಥೋನಿ~, `ಇನ್ಕಿಲಾಬ್~, `ಜಂಜೀರ್~, `ಡಾನ್~ ಮುಂತಾದ ಚಿತ್ರಗಳಲ್ಲಿ ಅಮಿತಾಬ್ ಮತ್ತು ಪ್ರಾಣ್ ಒಟ್ಟಿಗೆ ನಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry