ಸೋಮವಾರ, ಜನವರಿ 20, 2020
21 °C

ಯಾರೂ ರಾಜೀನಾಮೆ ಕೇಳಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): `ಯಾರೂ ನನ್ನ ರಾಜೀನಾಮೆಗೆ ಒತ್ತಾಯಿಸಿಲ್ಲ~ ಎಂದು ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಸರ್ಕಾರ ಮತ್ತು ಬಲಿಷ್ಠ ಸೇನೆಯ ಮಧ್ಯೆ ಬಿಕ್ಕಟ್ಟು ತಲೆದೋರಿರುವ ಸಂದಭದಲ್ಲಿ ಜರ್ದಾರಿ ಈ ಹೇಳಿಕೆ ನೀಡುವ ಮೂಲಕ ರಾಜಕೀಯ ಬಿಕ್ಕಟ್ಟು ನಿವಾರಣೆಗೆ ದೇಶದಿಂದ ಸುರಕ್ಷಿತವಾಗಿ ಪಾರಾಗಲು ಸೇನೆಯು ಅವಕಾಶ ನೀಡಿದೆ ವರದಿಯನ್ನು ಹಗುರವಾಗಿ ತೆಗೆದುಕೊಂಡಿದ್ದೇನೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

`ಇದುವರೆಗೆ ಯಾರೂ ನನ್ನ ರಾಜೀನಾಮೆ ಕೇಳಿಲ್ಲ, ಯಾರಾದರೂ ಕೇಳಿದಾಗ ತಿಳಿಸುತ್ತೇನೆ~ ಎಂದು ಜರ್ದಾರಿ ಅವರು ಜಿಯೊ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ.

`ನನ್ನ ರಾಜೀನಾಮೆ ಕೇಳುವಷ್ಟು ಮುಗ್ದರು ಪಾಕಿಸ್ತಾನದಲ್ಲಿ ಇದ್ದಾರೆ ಎಂದು ನಾನಂತೂ ಭಾವಿಸಿಲ್ಲ ಎಂದು ತಿಳಿಸಿರುವ ಅವರು, ನನ್ನ ರಾಜೀನಾಮೆಯಿಂದ ಅವರಿಗೇನಾಗಬೇಕಿದೆ? ನನ್ನ ಅಧಿಕಾರವನ್ನೆಲ್ಲ ಸಂಸತ್ತಿಗೆ ನೀಡಿದ್ದೇನೆ, ಸಂಸತ್ತಿನ ಅಧಿಕಾರವನ್ನು ಯಾರು ವಾಪಸ್ ಪಡೆಯುತ್ತಾರೆ?~ ಎಂದು ಜರ್ದಾರಿ ಕೇಳಿದ್ದಾರೆ.

ಮೆಮೊಗೇಟ್ ವಿವಾದದ ಹಿನ್ನೆಲೆಯಲ್ಲಿ ಸೇನೆಯು ರಾಜೀನಾಮೆ ನಿಡುವಂತೆ ಜರ್ದಾರಿ ಮೇಲೆ ಒತ್ತಡ ಹೇರುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.

ಮೆಮೊಗೇಟ್: ವಿಚಾರಣೆಗೆ ಹಾಜರಾಗಲು ಷರತ್ತು

ಇಸ್ಲಾಮಾಬಾದ್ (ಪಿಟಿಐ): ಮೆಮೊಗೇಟ್ ಹಗರಣದಲ್ಲಿ ಆರೋಪಿ ಎಂದು ಗುರುತಿಸಲಾಗಿರುವ ಪಾಕ್ ಮೂಲದ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಈ ಹಗರಣ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಅನೇಕ ಷರತ್ತುಗಳನ್ನು ಮುಂದಿಟ್ಟಿದ್ದಾರೆ.

ಮುಕ್ತ ಸಂಚಾರಕ್ಕೆ ಖಾತರಿ ಒದಗಿಸಬೇಕು, ವಿಚಾರಣೆಗಾಗಿ ಇಸ್ಲಾಮಾಬಾದ್‌ನಲ್ಲಿ ಇರುವಷ್ಟು ದಿವಸವೂ ಭದ್ರತೆ ನೀಡಬೇಕು ಮತ್ತಿತರ ಕರಾರುಗಳುಳ್ಳ ಇ- ಮೇಲ್ ಅನ್ನು ಇಜಾಜ್ ಪಾಕ್ ಸುಪ್ರೀಂಕೋರ್ಟ್ ನೇಮಿಸಿರುವ ತನಿಖಾ ಆಯೋಗಕ್ಕೆ ಕಳುಹಿಸಿದ್ದಾರೆ.

ಪ್ರತಿಕ್ರಿಯಿಸಿ (+)