`ಯಾರೇ ಬಿಜೆಪಿ ಬಿಟ್ಟರೂ ನಷ್ಟವಿಲ್ಲ'

7

`ಯಾರೇ ಬಿಜೆಪಿ ಬಿಟ್ಟರೂ ನಷ್ಟವಿಲ್ಲ'

Published:
Updated:

 


ಮುಧೋಳ: ಯಾರೇ ಪಕ್ಷ ತ್ಯಜಿಸಿದರೂ ಬಿಜೆಪಿಗೆ ನಷ್ಟವಿಲ್ಲ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ  ಹೇಳಿದರು.

 

ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಬಿಜೆಪಿ ರಾಷ್ಟ್ರೀಯ ಪಕ್ಷ. ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಬಿಜೆಪಿ ರಾಜ್ಯದಲ್ಲಿ ಮತ್ತೆ ಬಹುಮತ ಗಳಿಸುತ್ತದೆ. ಕರ್ನಾಟಕ ಜನತೆ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುವದಿಲ್ಲ ಎಂದರು.

 

ನಾಯಿ ಕೊಡೆಗಳಂತೆ ಹುಟ್ಟಿ ಕೊಳ್ಳು ಪಕ್ಷಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಚುನಾವಣೆಯವರೆಗೂ ಎಷ್ಟು ಪಕ್ಷಗಳು ಜೀವಂತವಾಗಿರುತ್ತವೆ ಕಾದು ನೋಡಿ ಎಂದರು.   ನಾನು ಬಿಜೆಪಿ ತ್ಯಜಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯಲ್ಲೇ ಇರು ತ್ತೇನೆ. ಪಕ್ಷ ಬದಲಾಯಿಸುವ ಜಾಯ ಮಾನ ನನ್ನದಲ್ಲ ಎಂದರು.   ಬಿ.ಎಚ್.ಪಂಚಗಾಂವಿ,  ಮಹಾಂತೇಶ ಹಿಟ್ಟಿನಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry