ಭಾನುವಾರ, ಡಿಸೆಂಬರ್ 15, 2019
21 °C

ಯಾವಗಲ್ಲ ಜೋಡಿ ರಥೋತ್ಸವ ನಾಳೆ

ಬಸವರಾಜ ಪಟ್ಟಣಶೆಟ್ಟಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾವಗಲ್ಲ ಜೋಡಿ ರಥೋತ್ಸವ ನಾಳೆ

ಯಾವಗಲ್ (ರೋಣ): ರಾಜ್ಯದಲ್ಲೇ ಅಪರೂಪ ಎನ್ನಲಾಗುವ ವೀರ ಭದ್ರೇಶ್ವರ ಹಾಗೂ ಬಸವಣ್ಣದೇವರ ಜೋಡಿ ರಥೋತ್ಸವ ಏಕಕಾಲಕ್ಕೆ ಇದೇ 4ರಂದು ಬೆನಕನ ಅಮಾವಾಸ್ಯೆಯ ಹಿಂದಿನ ದಿನ ಯಾವಗಲ್ ಗ್ರಾಮದಲ್ಲಿ ನಡೆಯುತ್ತದೆ.ಈ ಸಲ ನೂತನ ಜೋಡಿ ಗಡ್ಡಿ ತೇರುಗಳ ರಥೋತ್ಸವ ನಡೆಯುತ್ತಿರು ವುದು  ಜಾತ್ರೆಯ ವಿಶೇಷ.  ಸುಮಾರು 40 ಲಕ್ಷ ರೂಪಾಯಿಗಳಲ್ಲಿ ವೀರ ಭದ್ರೇಶ್ವರ ಹಾಗೂ ಬಸವಣ್ಣ ದೇವರ  ಗಡ್ಡಿ ತೇರುಗಳನ್ನು ಸದ್ಭಕ್ತರೇ ಕೂಡಿ ಸ್ವತಃ ಹಣ ಸಂಗ್ರಹಿಸಿ ನಿರ್ಮಾಣ ಮಾಡಿಸಿದ್ದು  ವಿಶೇಷವಾಗಿದೆ.ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ವಿಶೇಷತೆ  ಪಡೆದ ಈ ರಥೋತ್ಸವ ಅಣ್ಣ- ತಮ್ಮಂದಿರ ರಥೋತ್ಸವ ಎಂದೇ ಪ್ರತೀತಿ. ಹಲವಾರು ಶತಮಾನಗಳಷ್ಟು ಹಳೆಯದಾದ ಐತಿಹ್ಯವನ್ನು ಹೊಂದಿದೆ.ಗಡ್ಡಿ ತೇರಿನ ವಿಶೇಷ:  ಗ್ರಾಮದ ಗುರು ಹಿರಿಯರು ಕಳೆದ ವರ್ಷ ಎರಡು ದೇವರುಗಳಿಗೆ  ಗಡ್ಡಿತೇರುಗಳನ್ನು  ಮಾಡಿಸಲೇಬೇಕೆಂದು  ಯೋಜನೆ ಹಾಕಿ ಅದಕ್ಕಾಗಿ ನಿರಂತರ ಎಲ್ಲ ಭಕ್ತರನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಗಳನ್ನು ಸಂಗ್ರಹಿಸಿ ತಾಲ್ಲೂಕಿನ ಗಂಗಾಪೂರ ಗ್ರಾಮದ ರಥ ಶಿಲ್ಪಿ ಯಚ್ಚರಪ್ಪ ಹುಚ್ಚಪ್ಪ ಬಡಿಗೇರ ಅವರಿಗೆ ತೇರು ನಿರ್ಮಾಣದ ಜವಾಬ್ದಾರಿ ವಹಿಸಿದರು.ಯಚ್ಚರಪ್ಪ ಬಡಿಗೇರ ಅವರು ಕೇವಲ 8 ತಿಂಗಳುಗಳ ಕಡಿಮೆ ಅವಧಿ ಯಲ್ಲಿ ತಮ್ಮ 8 ಜನ ಸಂಗಡಿಗ ರೊಂದಿಗೆ ಹಗಲು ರಾತ್ರಿ ಎನ್ನದೇ  ನಿರಂತರ ಶ್ರಮ ವಹಿಸಿ ಕುಸುರಿ ಕೆತ್ತನೆ ಕಲೆ ಮೂಲಕ ಈ  ಆಕರ್ಷಕ ಗಡ್ಡಿ ತೇರುಗಳನ್ನು ನಿರ್ಮಿಸಿರುವುದು ಬಹಳ ವಿಶೇಷವಾಗಿದೆ. ತೇರು 37 ಅಡಿ ಮತ್ತು ಬಸವಣ್ಣನ ತೇರು 29 ಅಡಿ ಎತ್ತರದ್ದಾಗಿದೆ. ಈ ಗಡ್ಡಿ  ತೇರುಗಳು ನಿರಾತಂಕವಾಗಿ ಚಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು  ರಥ ಶಿಲ್ಪಿ ಯಚ್ಚರಪ್ಪ ಬಡಿಗೇರ ಹೇಳುತ್ತಾರೆ.ಕೆತ್ತನೆ ವಿಶೇಷ: ತೇರುಗಳಲ್ಲಿ ಪಾರ್ವತಿ ಪರಮೇಶ್ವರ, ವೀರಭದ್ರೇಶ್ವರ ಸರಸ್ವತಿ, ವಿಘ್ನೇಶ್ವರ, ಪುಟ್ಟರಾಜ ಗವಾಯಿಗಳು, ಸಿದ್ದಾರೂಢರು, ವಾಲ್ಮೀಕಿ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ದೇವರು,  ಪಂ. ಪುಟ್ಟರಾಜ ಗವಾಯಿಗಳನ್ನು ಚಿತ್ರಿಸಲಾಗಿದೆ.ಜಾತ್ರಾ ಕಾರ್ಯಕ್ರಮಗಳು: ಸೆ.3ರಂದು ಮಹಾ ಪ್ರಸಾದ, 4ರಂದು ಅಡ್ನೂರು ಪಂಚಾಕ್ಷರ  ಶಿವಾಚಾರ್ಯರು ಹಾಗೂ ನರಗುಂದ ಪಂಚಗ್ರಹ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರ ಸಾನ್ನಿಧ್ಯ ದಲ್ಲಿ ನೂತನ ಗಡ್ಡಿ ತೇರುಗಳ ರಥೋತ್ಸವ ನಡೆಯುವುದು.

ಪ್ರತಿಕ್ರಿಯಿಸಿ (+)