ಯಾವಾಗ ಹರಿದು ಬರುವುದೋ ನೀರು ?

7

ಯಾವಾಗ ಹರಿದು ಬರುವುದೋ ನೀರು ?

Published:
Updated:
ಯಾವಾಗ ಹರಿದು ಬರುವುದೋ ನೀರು ?

ಚಿಕ್ಕಬಳ್ಳಾಪುರ: ಜೂನ್ 20ರ ವೇಳೆಗೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಒಂದೆಡೆ ಭರವಸೆ ನೀಡುತ್ತಿದ್ದರೆ, ಮತ್ತೊಂದೆಡೆ ಎತ್ತಿನ ಹೊಳೆಯಿಂದ ಒಂದೇ ಒಂದು ಹನಿ ನೀರು ಬಿಡುವುದಿಲ್ಲ ಎಂದು ಹಾಸನದ ಸಕಲೇಶಪುರದಲ್ಲಿ ವಿವಿಧ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ.ಇನ್ನೇನೂ ಬಯಲು ಸೀಮೆ ಜಿಲ್ಲೆಗೆ ಧಾರಾಕರಾವಾಗಿ ನೀರು ಹರಿದುಬರು ವು ದು ಎಂದು ಕೇಂದ್ರ ಸಚಿವ ವೀರಪ್ಪ ಮೊ ಯಿಲಿ ಆಶಾಭಾವನೆ ಮೂಡಿಸುತ್ತಿದ್ದಾರೆ. ಆದರೆ ಹರಿದು ಬರುವ ನೀರಿನ ಶೇಖರ ಣೆಗೆ ಜಿಲ್ಲೆಯ ಕೆರೆ ಕುಂಟಗಳಲ್ಲಿ ಹೂಳು ತೆಗೆಯುವ ಅಗತ್ಯ ಕಾರ್ಯಾಚರಣೆ ಕಂಡು ಬರುತ್ತಿಲ್ಲ.ಜಿಲ್ಲೆಯ ಎರಡು ಪ್ರತ್ಯೇಕ ಶಾಶ್ವತ ನೀರಾವರಿ ಯೋಜನೆ ಹೋರಾಟ ಸಮಿತಿ ಗಳ ಪೈಕಿ ಒಂದು ಹೋರಾಟ ಸಮಿತಿಯು ಮನವಿಪತ್ರ ಸಲ್ಲಿಸುವುದರಲ್ಲಿ ಕಾರ್ಯ ನಿರತವಾಗಿದೆ. ಇನ್ನೊಂದು ಹೋರಾಟ ಸಮಿತಿ ಜಾಥಾ ಮೂಲಕ ಜನಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗುತ್ತಿದೆ.

 

ಮುಖ್ಯಮಂತ್ರಿ, ಸಚಿವರಿಗೆ, ಶಾಸಕರಿಗೆ, ಸ್ವಾಮೀಜಿಗೆ ಮತ್ತು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರಿಗೂ ಮನವಿಪತ್ರ   ಸಲ್ಲಿಸಿ ದ ಆಂಜನೇಯರೆಡ್ಡಿ ನೇತೃತ್ವದ ಹೋ ರಾಟ ಸಮಿತಿಯು ಎತ್ತಿನಹೊಳೆ ಯೋಜನೆಯಷ್ಟೇ ಬೇರೆ ಯೋಜನೆ ಯಿಂ ದಲೂ ನೀರು ಬಂದರೂ ಸ್ವಾಗತಿಸಲಿದೆ. ಆದರೆ ಎತ್ತಿನಹೊಳೆ ಯೋಜನೆ ಕಟು  ವಾಗಿ ವಿರೋಧಿಸುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದ ಹೋರಾಟ ಸಮಿತಿಯು ಪರಮಶಿವಯ್ಯ ಯೋಜನೆ ಜಾರಿಗೆ ಒತ್ತಾಯಿಸುತ್ತಿದೆ.ಈ ಎಲ್ಲದರ ನಡುವೆ ಮಳೆಯನ್ನೇ ಕಾಣದೇ ಕಂಗಾಲಾಗಿರುವ ರೈತ ಸಮು ದಾಯ ಬದುಕುವ ಆತ್ಮವಿಶ್ವಾಸ ಕಳೆದು ಕೊಳ್ಳುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ 1500 ಅಡಿ ಆಳದವರೆಗೆ ಕೊರೆದರೂ ಕೊಳವೆಬಾವಿಯಿಂದ ಹನಿ ನೀರು ಸಿಗದಿರುವ ಆತಂಕ ಒಂದೆಡೆ ಕಾಡುತ್ತಿದ್ದರೆ, ಮತ್ತೊಂದೆಡೆ ಮಕ್ಕಳಾ ದಿಯಾಗಿ ಎಲ್ಲರೂ ಕೃಷಿ ಚಟುವ ಟಿ ಕೆ ಯನ್ನು ತ್ಯಜಿಸಿ ನಗರಪ್ರದೇಶದ ಪಾಲಾಗುತ್ತಿರುವುದು ಕಳವಳ ಉಂಟು ಮಾಡಿದೆ.ನೀರಾವರಿ ಯೋಜನೆ ಅನು ಷ್ಠಾನವಾಗದಿದ್ದರೆ, ಫಲವತ್ತ ಜಮೀನಿದ್ದರೂ ನಿಷ್ಪ್ರಯೋಜಕ ವಾಗು ತ್ತದೆ ಎಂಬ ಭೀತಿ ಗ್ರಾಮಸ್ಥರಲ್ಲಿ ಆವರಿ ಸುತ್ತಿದೆ. ಮುಂದಿನ ವರ್ಷಗಳಲ್ಲಿ ಅಂತ ರ್ಜಲವು ಸಂಪೂರ್ಣವಾಗಿ ಬತ್ತಿದರೆ, `ನಾವು ಮತ್ತು ನಮ್ಮ ಮಕ್ಕಳು ಇಲ್ಲಿ ಬಾಳುವುದು ಹೇಗೆ~ ಎಂಬ ಪ್ರಶ್ನೆ ನಗರ ಪ್ರದೇಶದವರಿಗೆ ಕಾಡುತ್ತಿದೆ.`ವರ್ಷಗಳು ಕಳೆದಂತೆ ಕೃಷಿ ಚಟುವ ಟಿಕೆಯಲ್ಲಿ ತೊಡಗುತ್ತಿರುವವರ ಸಂಖ್ಯೆ ಯು ದಿನದಿಂದ ದಿನಕ್ಕೆ ಕಡಿಮೆ ಯಾಗ ತೊಡಗಿದೆ. ಫಲವತ್ತತೆಯ ಜಮೀನು ಗಳು ರಿಯಲ್ ಎಸ್ಟೇಟ್ ಉದ್ಯಮದ ಪಾಲಾಗು ತ್ತಿದ್ದು, ಆಹಾರೋತ್ಪಾ ದನೆ ಯ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಿದೆ.ಕೃಷಿ ಜಮೀನು ಗಳಲ್ಲಿ ಮನೆ, ರೆಸಾರ್ಟ್ ಮತ್ತು ಕಟ್ಟಡ ಗಳು ತಲೆಯೆತ್ತುತ್ತಿದ್ದು, ಅವು ಜನವಸತಿ ಪ್ರದೇಶಗಳಾಗಿ ಮಾರ್ಪಡುತ್ತಿವೆ. ಬಡ ರೈತರು ತಮ್ಮ ಗುಡಿಸಲು ಮತ್ತು ಶಿಥಿಲಾ ವಸ್ಥೆಯಲ್ಲಿರುವ ಮನೆಗಳನ್ನು ಬಿಟ್ಟು ಕೊಟ್ಟು ಬಂಗಲೆಗಳನ್ನು ಕಟ್ಟಿಕೊಳ್ಳಲು ಶ್ರೀಮಂತರಿಗೆ ಅವಕಾಶ ಮಾಡಿಕೊಡ ಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.ಮುಂದಿನ ದಿನಗಳು ಇನ್ನಷ್ಟು ಅಪಾಯ ಕಾರಿಯಾಗಿ ಪರಿಣಮಿಸಲಿವೆ~ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ `ಪ್ರಜಾವಾಣಿ~ಗೆ ತಿಳಿಸಿದರು.`ಜನಪ್ರತಿನಿಧಿಗಳಾದವರು ನೀರಾವರಿ ಹೆಸರಿನಲ್ಲಿ ವಂಚಿಸಬಾರದು. ಎತ್ತಿನ ಹೊಳೆ ಯೋಜನೆ ಕುರಿತು ಪೂರ್ಣ ಪ್ರಮಾಣದ ವರದಿ ಅಥವಾ ನೀಲನಕ್ಷೆ  ಯೇ ಸಿದ್ಧವಾಗದಿರುವಾಗ 28 ತಿಂಗಳೊ  ಳಗೆ ನೀರನ್ನು ತರುವುದಾಗಿ ಹೇಳಿ ವೀರಪ್ಪ ಮೊಯಿಲಿಯವರು ಜನರ ದಿಕ್ಕು ತಪ್ಪಿಸುತ್ತಿರುವುದು ಎಷ್ಟು ಸರಿ? ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ದಂತೆ ಕೈಗೊಳ್ಳಲಾಗಿರುವ ಪೂರ್ವಭಾವಿ ಸಿದ್ಧತೆಯನ್ನು ಯಾಕೆ ಇನ್ನೂ ಬಹಿರಂಗ ಪಡಿಸಲಾಗುತ್ತಿಲ್ಲ?

 

ಪೈಪ್‌ಲೈನ್ ಅಥವಾ ಕಾಲುವೆ ಮುಖಾಂತರವಾಗಿ ನೀರು ಹರಿ ದುಬರುವುದೋ ಎಂಬುದು ಸ್ಪಷ್ಟ ವಾಗಿಲ್ಲ.

ಅಷ್ಟೇ ಅಲ್ಲ, ಯಾವ್ಯಾವ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮೂಲಕ ನೀರು ಹರಿದು ಬರಲಿದೆ ಎಂಬುದು ಕೂಡ ಹೇಳಿಲ್ಲ~ ಎಂದು ಅವರು ತಿಳಿಸಿದರು.

ಇಂದು ಜಾಥಾಗೆ ಚಾಲನೆ

ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಜಾಗೃತಿ ಜಾಥಾ ಆರಂಭಿಸಲಿವೆ.ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಬೆಳಿಗ್ಗೆ 11.30ಕ್ಕೆ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಅವರು ಜಾಥಾಗೆ ಚಾಲನೆ ನೀಡಲಿದ್ದಾರೆ. ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್, ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅನಂತನಾಯಕ್, ಜಿ.ಪಂ.ಸದಸ್ಯೆಯರಾದ ಬಿ.ಸಾವಿತ್ರಮ್ಮ, ನಾರಾಯಣಮ್ಮ, ಬಾಗೇಪಲ್ಲಿ ತಾ.ಪಂ.ಅಧ್ಯಕ್ಷೆ ಶೋಭಾರಾಣಿ ಭಾಗವಹಿಸಲಿದ್ದಾರೆ.`ಮನೆಗೊಬ್ಬರು ಬನ್ನಿ, ಜಿಲ್ಲೆಗೆ ನೀರು ತನ್ನಿ~


ಚಿಕ್ಕಬಳ್ಳಾಪುರ: ಹೋಬಳಿ, ತಾಲ್ಲೂಕು ಮತ್ತು ನಗರಪ್ರದೇಶಕ್ಕೆ ಮಾತ್ರವೇ ಸೀಮಿತ ವಾಗದೇ ಗ್ರಾಮಗ್ರಾಮಗಳಲ್ಲೂ ಶಾಶ್ವತ ನೀರಾವರಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ತಿಂಗಳು ಪೂರ್ತಿ ಜಾಗೃತಿ ಜಾಥಾ ಮಾಡಲಾಗುವುದು ಎಂದು ಡಿವೈ ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದ್ದಾರೆ.`ಮನೆಗೊಬ್ಬರು ಬನ್ನಿ, ಜಿಲ್ಲೆಗೆ ನೀರು ತನ್ನಿ~ ಎಂಬ ಸಂದೇಶದೊಂದಿಗೆ ಗ್ರಾಮಮಟ್ಟ ಗಳಲ್ಲಿ ಜನರನ್ನು ಜಾಗೃತಗೊಳಿಸುವುದು ಜಾಥಾದ ಮುಖ್ಯ ಉದ್ದೇಶ. ಕ್ರಾಂತಿಗೀತೆ ಮತ್ತು ಬೀದಿ ನಾಟಕಗಳ ಮೂಲಕ  ನೀರಾವರಿ ಕುರಿತು ಅರಿವು ಮೂಡಿಸಲಾ ಗು ವುದು. ಜೂನ್ 22ಕ್ಕೆ ಜಾಥಾ ಕೊನೆಗೊಳಿಸಿ, ಹೋರಾಟ ತೀವ್ರಗೊಳಿಸಲಾಗುವುದು~ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry