ಗುರುವಾರ , ಏಪ್ರಿಲ್ 15, 2021
31 °C

ಯಾವುದೇ ವಿಷಯ ಗೌಪ್ಯವಾಗಿರಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):ಸ್ವಿಟ್ಜರ್ಲೆಂಡ್ ಮೂಲದ ಕಂಪೆನಿಗೆ ಟಿಎಸ್‌ಆರ್ ವ್ಯವಸ್ಥೆ ಒದಗಿಸಲು ನೀಡಿದ್ದ ಗುತ್ತಿಗೆ ವಿಷಯದಲ್ಲಿ ಒಳಸಂಚು ನಡೆದಿಲ್ಲ. ಈ ವಿಚಾರದಲ್ಲಿ ಏನನ್ನೂ ಗೌಪ್ಯವಾಗಿ ಇಟ್ಟಿರಲಿಲ್ಲ. ಆದ ಕಾರಣ ತಮ್ಮ ವಿರುದ್ಧ ಆರೋಪ ಹೊರಿಸುವುದು ಸರಿಯಲ್ಲ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಯುಜಿ) ಸಂಘಟನಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೊಟ್ ತಮ್ಮ ಪರ ವಕೀಲರ ಮೂಲಕ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದ್ದಾರೆ.2009ರ ಅಕ್ಟೋಬರ್ 12ರಂದು ನಡೆದ ಸಂಘಟನಾ ಸಮಿತಿ ಸಭೆಯಲ್ಲಿ ಸ್ವಿಸ್ ಕಂಪೆನಿಗೆ ಗುತ್ತಿಗೆ ನೀಡುವ ವಿಷಯ ಪ್ರಕಟಿಸಲಾಗಿತ್ತು. ಇದಕ್ಕೂ ಮುನ್ನ ನಡೆದ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರಲಾಗಿತ್ತು ಎಂದು ಹಿರಿಯ ವಕೀಲ ರಮೇಶ್ ಗುಪ್ತಾ ಅವರು ವಿಶೇಷ ನ್ಯಾಯಾಧೀಶ ತಲ್ವಂತ್ ಸಿಂಗ್ ಎದುರು ವಾದ ಮಂಡಿಸಿದ್ದಾರೆ.ಟಿಎಸ್‌ಆರ್ ವ್ಯವಸ್ಥೆ ಜಾರಿಗೊಳಿಸಲು ಸ್ವಿಸ್ ಕಂಪೆನಿಗೆ ಗುತ್ತಿಗೆ ನೀಡುವ ವಿಷಯವನ್ನು ಸಂಘಟನಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಬಹಿರಂಗವಾಗಿ ಪ್ರಕಟಿಸಲಾಗಿತ್ತು. ಇದಕ್ಕಿಂತ ಹೆಚ್ಚಿನ ಪಾರದರ್ಶಕತೆ ಬೇರೆನೂ ಇರಲಾರದು ಎಂದು ಹೇಳಿದ್ದಾರೆ. ಆ ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದೇಶಿಯರಿದ್ದರು. ಯಾವುದೇ ವಿಷಯ ಗೌಪ್ಯವಾಗಿ ಇಟ್ಟಿರಲಿಲ್ಲ. ಹೀಗಾಗಿ ಸಂಚು ನಡೆಸುವುದು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.