ಗುರುವಾರ , ನವೆಂಬರ್ 21, 2019
20 °C

ಯಾವ ಅಭ್ಯರ್ಥಿ ಬಳಿ ಎಷ್ಟು ಆಸ್ತಿ...

Published:
Updated:

ಆಲ್ಕೋಡು ಹನುಮಂತಪ್ಪ (ಜೆಡಿಎಸ್)

ನಗದು ಹಣ ರೂ 55 ಸಾವಿರ, ಪತ್ನಿ ಶೋಭಾ ಆಲ್ಕೋಡು ಹೆಸರಲ್ಲಿ ರೂ 18,500, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಹಣ ರೂ 1,42,213, ಪತ್ನಿ ಹೆಸರಲ್ಲಿ ರೂ  2.51 ಲಕ್ಷ , ಶೇರು ಸರ್ಟಿಫಿಕೆಟ್  ರೂ 3000, ಎಲ್‌ಐಸಿ ರೂ  2.50 ಲಕ್ಷ. ಟಾಟಾ ಸುಮೋ, ಸ್ಕಾರ್ಪಿಯೊ ಜತೆಗೆ ಅವರ ಪತ್ನಿ ಹೆಸರಲ್ಲಿ ಒಪೆಲ್ ಆಸ್ಟ್ರಾ ವಾಹನವಿದೆ.ಆಲ್ಕೋಡು ಬಳಿ 21 ಲಕ್ಷ ಮೌಲ್ಯದ 960 ಗ್ರಾಂ ಚಿನ್ನ,  ರೂ  2 ಲಕ್ಷ ಮೌಲ್ಯದ 5 ಕೆಜೆ ಬೆಳ್ಳಿ ಇದ್ದರೆ, ಪತ್ನಿ ಬಳಿ  ರೂ  7 ಲಕ್ಷ ಮೌಲ್ಯದ 320 ಗ್ರಾಂ ಚಿನ್ನ ಹಾಗೂ ರೂ  60 ಸಾವಿರ ಮೌಲ್ಯದ 1.5 ಕೆಜಿ ಬೆಳ್ಳಿ ಇದೆ. ಒಟ್ಟಾರೆ ಇವರ ಹೆಸರಿನಲ್ಲಿರುವ ಚರಾಸ್ತಿಗಳ ಮೌಲ್ಯ  ರೂ  29.50 ಲಕ್ಷ ಹಾಗೂ ಅವರ ಪತ್ನಿ ಹೆಸರಲ್ಲಿ ರೂ  11.29 ಲಕ್ಷ  ಚರಾಸ್ತಿ ಇದೆ.ತಮ್ಮ ಹೆಸರಿನಲ್ಲಿ ಯಾವುದೇ ಕೃಷಿಭೂಮಿ ಇರುವುದಿಲ್ಲ ಎಂದು ಹೇಳಿರುವ ಅವರು ತಮ್ಮ ತಾಯಿ ವೆಂಕಮ್ಮ ಯಲ್ಲಪ್ಪ ಆಲ್ಕೋಡ ಇವರ ಹೆಸರಿನಲ್ಲಿರುವ ಕೃಷಿ ಭೂಮಿಯ ವಿವರ ನೀಡಿದ್ದು ಅವುಗಳ ಇಂದಿನ ಮಾರುಕಟ್ಟೆ ಮೌಲ್ಯ ರೂ  6.80 ಲಕ್ಷ, ಪತ್ನಿಯ ಹೆಸರಿನ ಕೃಷಿ ಭೂಮಿ ಮೌಲ್ಯ ರೂ  35 ಸಾವಿರ. ತಾಯಿಯ ಹೆಸರಿನಲ್ಲಿ ಧಾರವಾಡದಲ್ಲಿ ರೂ 1 ಲಕ್ಷ ಮೌಲ್ಯದ ನಿವೇಶನವಿದೆ.ಇನ್ನು ಹನುಮಂತಪ್ಪ ಬೆಂಗಳೂರಿನಲ್ಲಿ 4000 ಚದರ ಅಡಿ ವಿಸ್ತೀರ್ಣದ ರೂ  25 ಲಕ್ಷ ಮೌಲ್ಯದ ಒಎಂಬಿಆರ್ ಬಡಾವಣೆಯಲ್ಲಿ ನಿವೇಶನ ಹೊಂದಿದ್ದಾರೆ.  ಹಾಗೆಯೇ ಧಾರವಾಡದಲ್ಲಿ ಅತ್ತಿಕೊಳ್ಳದಲ್ಲಿ 2400 ಚದರ ಅಡಿ ವಿಸ್ತೀರ್ಣದ ರೂ  9.50 ಲಕ್ಷ ಮೌಲ್ಯದ ನಿವೇಶನ ಮತ್ತು ದೊಡ್ಡನಾಯಕನ ಕೊಪ್ಪದಲ್ಲಿ 4000 ಚದರ ಅಡಿ ವಿಸ್ತೀರ್ಣದ ರೂ  80 ಲಕ್ಷ ಮೌಲ್ಯದ ನಿವೇಶನವಿದೆ. ಒಟ್ಟಾರೆ ರೂ  1.14 ಕೋಟಿ ಸ್ಥಿರಾಸ್ತಿ ಮೌಲ್ಯದ ಆಸ್ತಿ ಇವರ ಹೆಸರಿನಲ್ಲಿದೆ. ಆಲ್ಕೋಡ್ ಅವರು ರೂ 8.50 ಲಕ್ಷ ಸಾಲ ಹೊಂದಿದ್ದಾರೆ.ಶಂಕರಪ್ಪ ಬಿಜವಾಡ (ಕೆಜೆಪಿ)

ಬ್ಯಾಂಕ್ ಖಾತೆಯ ಠೇವಣಿ ರೂ  25 ಲಕ್ಷ, ಪತ್ನಿ ಹೆಸರಲ್ಲಿ ರೂ 5000, ವಿಜಯ ಬ್ಯಾಂಕ್‌ನಲ್ಲಿ 100 ಶೇರು, ಟಿಲ್ಲರ್, ಟ್ರ್ಯಾಕ್ಟರ್ ಹಾಗೂ ಟ್ರಕ್‌ಗಳನ್ನು  ಹೊಂದಿದ್ದಾರೆ.ರೂ  7.80 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ, ರೂ 4 ಲಕ್ಷ ಮೌಲ್ಯದ 4 ಕೆಜೆ ಬೆಳ್ಳಿ, ಪತ್ನಿಯ ಬಳಿ 150 ಗ್ರಾಂ ಬಂಗಾರ, 1 ಕೆಜೆ ಬೆಳ್ಳಿ ಇದೆ. ಒಟ್ಟಾರೆ ಚರಾಸ್ತಿ ಮೌಲ್ಯ ರೂ  67.91 ಲಕ್ಷ.  ಪತ್ನಿಯ ಚರಾಸ್ತಿ ಮೌಲ್ಯ ರೂ 5.6 ಲಕ್ಷ. ಮಕ್ಕಳ ಸ್ಥಿರಾಸ್ತಿ ಮೌಲ್ಯ ರೂ 10.97 ಲಕ್ಷ.ಇನ್ನು ವಿವಿಧೆಡೆ  ಕೃಷಿಭೂಮಿಯನ್ನು ಹೊಂದಿದ್ದಾರೆ.   ಶಂಕರಪ್ಪ ಹೊಂದಿರುವ ಆಸ್ತಿ ಮೌಲ್ಯ ರೂ  92.03 ಲಕ್ಷ, ಅವರ ಪತ್ನಿ ರೂ  3.81 ಲಕ್ಷ, ಮಕ್ಕಳು ರೂ 3 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೃಷಿಯೇತರ ಭೂಮಿಯ ಮೌಲ್ಯ ರೂ 5.94. ವಿವಿಧೆಡೆ ವಸತಿ ಕಟ್ಟಡಗಳನ್ನು ಹೊಂದಿದ್ದು ಅವುಗಳ ಪ್ರಸಕ್ತ ಮಾರುಕಟ್ಟೆ ಮೌಲ್ಯ ರೂ 17.50 ಲಕ್ಷ.  ವಿವಿಧ ಬ್ಯಾಂಕುಗಳಲ್ಲಿ ಅವರು ಪಡೆದ ಸಾಲಗಳ ಮೊತ್ತ ರೂ  30 ಲಕ್ಷ.ಪ್ರೇಮನಾಥ ಚಿಕ್ಕತುಂಬಳ (ಬಿಎಸ್‌ಪಿ )

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದಿಂದ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿರುವ ಹಳೇ ಹುಬ್ಬಳ್ಳಿ ಕೋಟಿಲಿಂಗ ನಗರದ ನಿವಾಸಿ ಪ್ರೇಮನಾಥ ಚಿಕ್ಕತುಂಬಳ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಹೀಗಿದೆ.ಬ್ಯಾಂಕ್ ಖಾತೆಯಲ್ಲಿ ರೂ  80 ಸಾವಿರ, ಪತ್ನಿ ಹೆಸರಲ್ಲಿ ರೂ  7 ಸಾವಿರ ಹಣ ಹೊಂದಿದ್ದು, 90 ಸಾವಿರ ಮೌಲ್ಯದ 40 ಗ್ರಾಂ ಚಿನ್ನ ಮತ್ತು ಪತ್ನಿಯ ಬಳಿ ರೂ  1,46,000 ಮೌಲ್ಯದ 65 ಗ್ರಾಂ ಚಿನ್ನವನ್ನು ಹೊಂಡಿದ್ದಾರೆ.  ಟಾಟಾ ಇಂಡಿಕಾ, ಆಮ್ನಿ , ಎರಡು ಟಾಟಾ ಇಂಡಿಗೊ ಕಾರು ಹಾಗೂ ಪಲ್ಸರ್ ಬೈಕ್ ಹೊಂದಿದ್ದಾರೆ. ಒಟ್ಟಾರೆ ರೂ  21,21,487 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಜತೆಗೆ ರೂ  10.35 ಲಕ್ಷ ವಾಹನ ಸಾಲವನ್ನು ಹೊಂದಿದ್ದಾರೆ.ಕೋಟಿಲಿಂಗ ನಗರದಲ್ಲಿ ತಮ್ಮ ಸಹೋದರಿಯಿಂದ ಕಾಣಿಕೆಯಾಗಿ ಪಡೆದಿರುವ 1,650 ಚದರ ಅಡಿ ನಿವೇಶನವನ್ನು ಇವರು ಹೊಂದಿದ್ದು  ಇದರ ಮಾರುಕಟ್ಟೆ ಮೌಲ್ಯ ರೂ  25 ಲಕ್ಷ. 2008ರಲ್ಲಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಂತೆ ಅವರ ಚರಾಸ್ತಿ ಮೌಲ್ಯ ರೂ  2.03 ಲಕ್ಷ. ಸ್ಥಿರಾಸ್ತಿ ಘೋಷಣೆ ಮಾಡಿರಲಿಲ್ಲ.

ಪ್ರತಿಕ್ರಿಯಿಸಿ (+)