ಭಾನುವಾರ, ಜೂನ್ 13, 2021
22 °C

ಯುಎಇ, ಭಾರತದಲ್ಲಿ ಐಪಿಎಲ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಪ್ರಿಲ್‌–ಮೇ­ನಲ್ಲಿ ಲೋಕಸಭೆ ಚುನಾವಣೆ ನಡೆಯು­ತ್ತಿರುವುದರಿಂದ ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಆರಂಭಿಕ ಹಂತದ ಪಂದ್ಯಗಳನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಆಯೋಜಿ­ಸಲು  ಬಿಸಿಸಿಐ ತೀರ್ಮಾನಿಸಿದೆ.ಯುಎಇನಲ್ಲಿ ಏಪ್ರಿಲ್‌ 16ರಿಂದ 30ರವರೆಗೆ ಒಟ್ಟು 16 ಪಂದ್ಯಗಳು ನಡೆಯಲಿವೆ. ಮೇ 1ರಿಂದ 12ರವರೆಗಿನ ಹಂತದ ಪಂದ್ಯಗಳನ್ನು ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಭಾರತ­ದಲ್ಲಿ, ಸಿಗದಿದ್ದರೆ ಬಾಂಗ್ಲಾದೇಶದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.ಮೇ 13ರಿಂದ ಜೂನ್‌ 1ರವರೆಗಿನ ಹಂತದ ಪಂದ್ಯಗಳು ಭಾರತದಲ್ಲಿ ನಡೆಯುವುದು ಖಚಿತವಾಗಿದೆ. ಮೇ 1ರಿಂದಲೇ ಭಾರತ­ದಲ್ಲಿ ಪಂದ್ಯ­ ನಡೆಸಲು ಅನುವು ಮಾಡಿ­ಕೊಡು­ವಂತೆ ಕ್ರಿಕೆಟ್‌ ಮಂಡಳಿ­ಯು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿ­ಸಿದೆ. ಚುನಾವಣೆ ಮುಗಿದ ರಾಜ್ಯಗಳಲ್ಲಿ ಈ ಪಂದ್ಯಗಳನ್ನು ಆಯೋಜಿಸಲು ಮನವಿ ಮಾಡಲಾಗಿದೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.