ಬುಧವಾರ, ನವೆಂಬರ್ 20, 2019
27 °C

ಯುಗಾದಿ ಫಲ: ಹಿಂಗಾರು ಬೆಳೆ ಉತ್ತಮ

Published:
Updated:

ಈ ವರ್ಷ ಏಪ್ರಿಲ್ 10ರಂದು ಮಧ್ಯಾಹ್ನ 3.5ಕ್ಕೆ ರೇವತಿ ನಕ್ಷತ್ರ ಸಿಂಹ ಲಗ್ನದಲ್ಲಿ ನೂತನ ಸಂವತ್ಸರ ಆರಂಭವಾಗಲಿದ್ದು, ಸಂವತ್ಸರದ ಹೆಸರು ವಿಜಯ ಎಂದು ಇದೆ. ವೈದೃತಿ ಯೋಗ ಕಂಸ್ತುಜ್ಞ ಕರಣವಿದ್ದು, ವರುಣ ಮಂಡಲವಿದೆ. ಈ ವರ್ಷದಲ್ಲಿ ರಾಜಕೀಯ ಕಲಹ ಹೆಚ್ಚುವುದು. ಅಗ್ನಿಭಯ, ಉಗ್ರರ ಹಾವಳಿ ಉಲ್ಬಣವಾಗುವುದು. ರಾಷ್ಟ್ರ ರಾಜಕೀಯ ಸ್ಥಿತಿ ಗಂಭೀರವಾಗುವುದು. ವಿರೋಧ ಪಕ್ಷದ ಪ್ರಾಬಲ್ಯ ವೃದ್ಧಿಸುವುದು. ಅಧಿಕಾರ ಬದಲಾವಣೆಯ ಯೋಗವಿದೆ.ಮಹಿಳಾ ರಾಜಕಾರಣಿಗಳ ಪ್ರಭೆ ಹೆಚ್ಚುವುದು. ಬರದ ಪ್ರಭಾವದಿಂದ ದವಸ, ಧಾನ್ಯಗಳ ಬೆಲೆಗಳು ಏರಿಕೆಯಾಗಿ ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿ ಬೀಳುವುದು. ಚೀನಾ-ಪಾಕಿಸ್ತಾನದ ಗಡಿ ತಂಟೆ ಸಮಸ್ಯೆ ಉದ್ಭವವಾಗಿ ಯುದ್ಧ ಚಟುವಟಿಕೆ ನಡೆಯುವ ಸಂಭವವಿದೆ.ಹಿಂಗಾರು ಬೆಳೆ ಉತ್ತಮವಾಗಲಿದೆ. ನಲ್ಲು, ಕಡಲೆ, ಅಗಸಿ, ಕುಸುಬೆ, ತೊಗರಿ, ಬಿಳಿಜೋಳ ಉತ್ತಮ ಫಸಲಾಗುತ್ತದೆ. ರಾಜಸ್ತಾನ-ಬಿಹಾರಕ್ಕೆ ಬರ ಪೀಡೆಯಿದೆ. ಯುಗಾದಿ ಹಬ್ಬದ ಹತ್ತಿರ ಉತ್ತಮ ಮಳೆಯಾಗಿ ಜನರಲ್ಲಿ ಸಂತಸ ತರಲಿದೆ. ದವನದ ಹುಣ್ಣಿಮೆ ಗ್ರಹಣ ಪ್ರಭೆಯಿಂದ ಧಾನ್ಯಗಳ ಏರಿಕೆ, ರಾಜಕೀಯ ಕಲಹ ಹೆಚ್ಚುವುದು. ಈ ವರ್ಷ ಅತಿವೃಷ್ಟಿ-ಅನಾವೃಷ್ಟಿ ಇರುವ ಕಾರಣ ಹಾನಿ ಸಂಭವವಿದೆ. ಚೈತ್ರ ಮಾಸದಲ್ಲಿ ಎಣ್ಣೆ ತೊಗರಿ, ಷೇರು ಮಾರುಕಟ್ಟೆ ವಿಶೇಷ ತೇಜಿಯಾಗಲಿದೆ. ವೈಶಾಖ ಮಾಸದಲ್ಲಿ ಎಣ್ಣೆ, ಬಂಗಾರ, ಬೆಳ್ಳಿ ಮಂದಿಯಾಗುವ ಸಂಭವವಿದೆ.ರಾಜಕೀಯ ಒಡಕು ತೋರುವುದು. ಪ್ರಜೆಗಳಿಗೆ ಪೀಡೆಯಿದೆ. ಜ್ಯೇಷ್ಠ ಮಾಸದಲ್ಲಿ ರಾಜಕೀಯ ಕಲಹ ಹೆಚ್ಚುವುದು. ಆಷಾಢದಲ್ಲಿ ಉತ್ತಮ ಮಳೆಯಾಗುವುದು. ಶ್ರಾವಣದಲ್ಲಿ ದೊಡ್ಡ ಮಳೆಯಾಗುವುದು. ಭಾದ್ರಪದದಲ್ಲಿ ಧಾನ್ಯಗಳ ಬೆಲೆಯಲ್ಲಿ ಇಳಿಕೆ ಇರುತ್ತದೆ. ಆಶ್ವಿಜದಲ್ಲಿ ಷೇರುಪೇಟೆಯಲ್ಲಿ ದರ ಏರಿಕೆಯಾಗುವುದು. ಕಾರ್ತಿಕದಲ್ಲಿ ಬೆಳೆಗಳಿಗೆ ಕ್ರಿಮಿ, ಕೀಟಗಳ ಹಾವಳಿ ಹೆಚ್ಚುವುದು. ಮಾರ್ಗಶಿರದಲ್ಲಿ ಜನರಿಗೆ ಪೀಡೆಯಿದೆ. ಪುಷ್ಯದಲ್ಲಿ ರಾಜಕೀಯ ಸ್ಥಿರತೆ ತೋರುವುದು. ಮಾಘದಲ್ಲಿ ಭಯೋತ್ಪಾದನೆ ಹೆಚ್ಚುವುದು. ಫಾಲ್ಗುಣದಲ್ಲಿ ಲೋಕಕ್ಕೆ ಅಪಜಯವಾಗುವುದು. ರೈತರಿಗೆ ಬೆಲೆ ಏರಿಕೆಯು ವರ ಪ್ರಸಾದವಾಗುವುದು.

ಪ್ರತಿಕ್ರಿಯಿಸಿ (+)