ಯುಟ್ಯೂಬ್ ನಿಷೇಧ ತೆರವು

7
ಪಾಕಿಸ್ತಾನ ಸರ್ಕಾರದ ನಿರ್ಧಾರ ಪ್ರಕಟಿಸಿದ ಸಚಿವ ಮಲಿಕ್

ಯುಟ್ಯೂಬ್ ನಿಷೇಧ ತೆರವು

Published:
Updated:
ಯುಟ್ಯೂಬ್ ನಿಷೇಧ ತೆರವು

ಇಸ್ಲಾಮಾಬಾದ್ (ಪಿಟಿಐ): ಅಂತರಜಾಲ ವೀಡಿಯೊ ತಾಣ `ಯುಟ್ಯೂಬ್' ಗೆ ಹೇರಿರುವ ನಿಷೇಧವನ್ನು  ಅತಿ ಶೀಘ್ರವೇ ಹಿಂಪಡೆಯಲಾಗುವುದು ಎಂದು ಪಾಕಿಸ್ತಾನದ ಒಳಾಡಳಿತ ಸಚಿವ  ರೆಹಮಾನ್ ಮಲಿಕ್ ಹೇಳಿದ್ದಾರೆ.ಪಾಕಿಸ್ತಾನ ಸರ್ಕಾರ ಮೂರು ತಿಂಗಳ ಹಿಂದೆ ಯುಟ್ಯೂಬ್ ವಿರುದ್ಧ ನಿಷೇಧ ಹೇರಿತ್ತು. ನಿಷೇಧ ತೆರವುಗೊಳಿಸುವ ಸರ್ಕಾರದ ನಿರ್ಧಾರವನ್ನು ಮಲಿಕ್ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.ಯುಟ್ಯೂಬ್‌ನಲ್ಲಿ ಧರ್ಮನಿಂದನೆ  ಮಾಡುವಂತಹ ಮತ್ತು ಅಶ್ಲೀಲ ವೀಡಿಯೊಗಳಿಗ ಕಡಿವಾಣ ಹಾಕಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.`ಯೂಟ್ಯೂಬ್‌ನ ಪಾಲುದಾರರು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯ  ನೇತೃತ್ವವನ್ನು ನಾನು ವಹಿಸಿದ್ದೆ. ಯುಟ್ಯೂಬ್‌ನಲ್ಲಿರುವ ಇಸ್ಲಾಂ ವಿರೋಧಿ ವಿಷಯಗಳನ್ನು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ನಿರ್ಬಂಧಿಸಲಿದೆ. 24 ಗಂಟೆಗಳ ಒಳಗಾಗಿ ನಿಷೇಧ ಹಿಂಪಡೆಯುವುದನ್ನು ನಿರೀಕ್ಷಿಸಬಹುದು' ಎಂದು ರೆಹಮಾನ್ ಮಲಿಕ್ ಟ್ವೀಟ್ ಮಾಡಿದ್ದಾರೆ.ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ನಿಷೇಧ ತೆರವುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಅಸಭ್ಯ ವಿಷಯಗಳನ್ನು ತಡೆಯಲು ಪಿಟಿಎ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.`ಇನ್ನೊಸೆನ್ಸ್ ಆಫ್ ಮುಸ್ಲಿಂ' ಚಿತ್ರ ಸೇರಿದಂತೆ ಧರ್ಮನಿಂದನೆ ಮಾಡುವಂತಹ ಚಲನಚಿತ್ರಗಳು, ವಿಡಿಯೊಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಸೆಪ್ಟೆಂಬರ್‌ನಲ್ಲಿ `ಯುಟ್ಯೂಬ್' ಮೇಲೆ ನಿಷೇಧ ಹೇರುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.ಈ ಚಿತ್ರಕ್ಕೆ ಪಾಕಿಸ್ತಾನದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry