ಯುದ್ಧ ವಿಮಾನ ಪತನ

7

ಯುದ್ಧ ವಿಮಾನ ಪತನ

Published:
Updated:

ಭೋಪಾಲ್/ ನವದೆಹಲಿ (ಪಿಟಿಐ):  ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್ 2000 ಯುದ್ಧ ವಿಮಾನವೊಂದು ಶುಕ್ರವಾರ ಮಧ್ಯಪ್ರದೇಶದ ಬಿಂದ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ.

ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪತನದ ಸಂದರ್ಭದಲ್ಲಿ ಹೊರ ಜಿಗಿಯಲು ಯಶಸ್ವಿಯಾಗಿದ್ದಾರೆ.

ದಿನನಿತ್ಯದಂತೆ ಯುದ್ಧ ತರಬೇತಿಗಾಗಿ ವಿಮಾನವು ಗ್ವಾಲಿಯರ್‌ನಲ್ಲಿರುವ ಮಹಾರಾಜಪುರ ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು. ಆಗಸಕ್ಕೆ ನೆಗೆದ ಸ್ವಲ್ಪ ಸಮಯದಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು ಎಂದು ಭಾರತೀಯ ವಾಯುಪಡೆಯ ವಕ್ತಾರರೊಬ್ಬರು ದೆಹಲಿಯಲ್ಲಿ ತಿಳಿಸಿದ್ದಾರೆ.

ಇಬ್ಬರು ಪೈಲಟ್‌ಗಳು ವಿಮಾನದಿಂದ ಹೊರಜಿಗಿಯಲು ಯಶಸ್ವಿಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಅಪಘಾತದ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಲು ಭಾರತೀಯ ವಾಯುಪಡೆ  ತನಿಖೆಗೆ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry