ಯುನಿಸೆಫ್: ದಾಖಲಾತಿ ಆಂದೋಲನ

ಭಾನುವಾರ, ಜೂಲೈ 21, 2019
27 °C

ಯುನಿಸೆಫ್: ದಾಖಲಾತಿ ಆಂದೋಲನ

Published:
Updated:

ಹನುಮಸಾಗರ: ಮಕ್ಕಳ ರಕ್ಷಣಾ ಯೋಜನೆ ಯುನಿಸೆಫ್ ಇವರಿಂದ  ಸಮೀಪದ ನಿಲೋಗಲ್ ಗ್ರಾಮದಲ್ಲಿ ಮಂಗಳವಾರ ಶಾಲಾ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮ ನಡೆಸಿದರು. ನಂತರ ನಡೆದ           ಕಾರ್ಯಕ್ರಮದಲ್ಲಿ ಮುಖಂಡರು ಗ್ರಾಮಸ್ಥರಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಸಲಹೆಗಳನ್ನು         ನೀಡಿದರು. ತಾಲ್ಲೂಕ ಪಂಚಾಯಿತಿ ಸದಸ್ಯ ಶಾಂತಪ್ಪ ಗುಜ್ಜಲ, ಯುನಿಸೆಫ್ ತಾಲ್ಲೂಕ ಸಂಘಟಕ  ಶರಣಪ್ಪ ಮಾದರ, ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕರು, ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಸವರಾಜ ದೂಪದ ಸ್ವಾಗತಿಸಿದರು, ಸಮುದಾಯ ಸಂಘಟಕ ಶರಣಬಸಪ್ಪ ಹರಿಜನ ಕಾರ್ಯಕ್ರಮ ನಿರೂಪಿಸಿ   ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry