ಯುಪಿಎಸ್‌ಸಿ ಪರೀಕ್ಷೆ ಮಾರ್ಪಾಡಿಗೆ ಶಿಫಾರಸು

7

ಯುಪಿಎಸ್‌ಸಿ ಪರೀಕ್ಷೆ ಮಾರ್ಪಾಡಿಗೆ ಶಿಫಾರಸು

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಸನ್ನಿವೇಶಕ್ಕೆ ಸರಿ ಹೊಂದುವಂತೆ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬದಲಾವಣೆ ತರಬೇಕೆಂದು ಕೇಂದ್ರೀಯ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.`ಈಗಿರುವ ನಾಗರಿಕ ಸೇವಾ ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಮಾಡುವಂತೆ ಯುಪಿಎಸ್‌ಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ' ಎಂದು ಸಾರ್ವಜನಿಕ ಕುಂದುಕೊರತೆ, ಸಿಬ್ಬಂದಿ ಮತ್ತು ಪಿಂಚಣಿ ಖಾತೆ ಸಚಿವ ವಿ. ನಾರಾಯಣಸ್ವಾಮಿ ಗುರುವಾರ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.`ಯುಪಿಎಸ್‌ಸಿ ಮಾಡಿರುವ ಸಲಹೆಗೆ ಸಂಬಂಧಿಸಿದಂತೆ ಸರ್ಕಾರ ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ' ಎಂದು ಅವರು ಹೇಳಿದ್ದಾರೆ. ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಅರುಣ್ ಎಸ್. ನಿಗವೇಕರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಈ ಕುರಿತು ವರದಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry