ಯುಪಿಎ ಔತಣಕ್ಕೆ

ಬುಧವಾರ, ಜೂಲೈ 24, 2019
27 °C

ಯುಪಿಎ ಔತಣಕ್ಕೆ

Published:
Updated:

ಕೋಲ್ಕತ್ತ (ಪಿಟಿಐ): ರಾಷ್ಟ್ರಪತಿ ಚುನಾವಣೆ ಪೂರ್ವಭಾವಿಯಾಗಿ ರಾಜಧಾನಿಯಲ್ಲಿ ಇದೇ 18ರಂದು ರಾತ್ರಿ ಮಿತ್ರಪಕ್ಷಗಳಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಏರ್ಪಡಿಸಿರುವ ಔತಣಕೂಟಕ್ಕೆ ನೀಡಿದ ಆಹ್ವಾನವನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ತಿರಸ್ಕರಿಸಿದ್ದಾರೆ.ಮಮತಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಔತಣಕೂಟಕ್ಕೆ ಆಹ್ವಾನ ನೀಡಿದರು. ಆದರೆ, ಅಂದು ತಮಗೆ ಔತಣಕೂಟಕ್ಕೆ ಹಾಜರಾಗುವುದು ಸಾಧ್ಯವಿಲ್ಲ ಎಂದು ಮಮತಾ ತಿಳಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ತಿಳಿಸಿವೆ. `ದೀದಿ~ ಔತಣಕೂಟ ಬಹಿಷ್ಕರಿಸಿಲ್ಲ. ಪಕ್ಷದ ವತಿಯಿಂದ ಜುಲೈ 21ರಂದು ನಡೆಯಲಿರುವ ಹುತಾತ್ಮರ ದಿನಾಚರಣೆ ರ‌್ಯಾಲಿ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು  ಮೂಲಗಳು ಸ್ಪಷ್ಟಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry