ಶುಕ್ರವಾರ, ಮೇ 14, 2021
21 °C

ಯುಪಿಎ ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ - ಬಿಜೆಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಕೇಂದ್ರ ಸರ್ಕಾರವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬಾರದೆಂದು ನಿರ್ಧಾರ ತಳೆದಿದೆ ಎಂದು ಶುಕ್ರವಾರ ಆರೋಪಿಸಿರುವ ವಿರೋಧ ಪಕ್ಷ ಬಿಜೆಪಿಯು, ಈ ಕುರಿತು ಅಮೆರಿಕ ಪ್ರವಾಸದ ವೇಳೆ ಪ್ರಧಾನ ಮಂತ್ರಿ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದೆ.ಇತ್ತೀಚೆಗೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೊಂದಿಗೆ ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಕೌಶಿಕ್ ಬಸು ಅವರು `2014ರಲ್ಲಿ ಜರಗುವ ಲೋಕಸಭಾ ಚುನಾವಣೆ ತನಕ ಯಾವುದೇ ಸುಧಾರಣೆ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ, 2015ರ ನಂತರ ಭಾರತವು ಆರ್ಥಿಕವಾಗಿ ವೇಗದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಲಿದೆ ~ಎಂದು  ಹೇಳಿದ್ದರು.`ಬಸು ಅವರ ಹೇಳಿಕೆಯು ಯುಪಿಎ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯ ಮಾಡಬಾರದೆಂದು ನಿರ್ಧಾರ ತಳೆದಿರುವುದನ್ನು ಸಂಕೇತಿಸುತ್ತದೆ~ ಎಂದು ಬಿಜೆಪಿಯ ಮುಖಂಡ ರಾಜೀವ್ ಪ್ರತಾಪ್ ರೂಢಿ ಅವರು ಪ್ರತಿಕ್ರಿಯಿಸಿದ್ದಾರೆ.~ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರಗಳಿಂದಾಗಿ ರೋಸಿ ಹೋಗಿರುವ ಮಿತ್ರ ಪಕ್ಷಗಳು ಯುಪಿಎ ಸರ್ಕಾರಕ್ಕೆ ಹಲವಾರು ವಿಷಯಗಳಲ್ಲಿ ಬೆಂಬಲ ನೀಡುತ್ತಿಲ್ಲ, ದುರಾಡಳಿತದಿಂದಾಗಿ ಅವು ಬಹಳ ಕಾಲ ಯುಪಿಎದೊಂದಿಗೆ ಮುಂದುವರಿಯುವುದಿಲ್ಲ~ ಎಂದು ರೂಢಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.