`ಯುಪಿಎ ಸರ್ಕಾರ ಪತನಗೊಳಿಸಿ'

7

`ಯುಪಿಎ ಸರ್ಕಾರ ಪತನಗೊಳಿಸಿ'

Published:
Updated:

ಕೃಷ್ಣರಾಜಪುರ: ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ದೇಶದ ಜನ ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣವಾದ ಯುಪಿಎ ಸರ್ಕಾರವನ್ನು ಪತನಗೊಳಿಸಲು ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.ಕೃಷ್ಣರಾಜಪುರದಲ್ಲಿ ಏರ್ಪಡಿಸಿದ್ದ ಕ್ಷೇತ್ರ ಬಿಜೆಪಿ ಘಟಕದ ಕಾರ್ಯಕರ್ತರ ಅಧಿಕಾರ ಹತ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಾಂಧೀಜಿ ಅವರು ಗೋಹತ್ಯೆಯನ್ನು ತೀವ್ರವಾಗಿ ವಿರೋಧಿಸ್ದ್ದಿದರು. ಆದರೆ ಕಾಂಗ್ರೆಸ್ ಅವರ ವಿರೋಧವನ್ನು ಮರೆತಿದೆ ಎಂದು ಟೀಕಿಸಿದರು. ಬಿಜೆಪಿ ಜನಹಿತ ಕಾಯುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ದೇಶದ ಒಳಿತಿಗಾಗಿ ಜನಾಂದೋಲನ ರೂಪಿಸುವ ಕಾಲ ಸನ್ನಿಹಿತವಾಗಿದೆ ಎಂದರು.ಮಾಜಿ ಶಾಸಕ ಎನ್.ಎಸ್. ನಂದೀಶ ರೆಡ್ಡಿ, ಕಳೆದ ಚುನಾವಣೆಯಲ್ಲಿ ಪಕ್ಷ ಸೋಲಲು ಕಾಂಗ್ರೆಸ್ ವಾಮಮಾರ್ಗ ಅನುಸರಿಸಿದ್ದೇ ಕಾರಣ. ಇದು ಬಹುಕಾಲ ನಿಲ್ಲುವಂತದ್ದಲ್ಲ ಎಂದು ಹೇಳಿದರು.ನಗರ ಜಿಲ್ಲಾ ಘಟಕದ ಅಧ್ಯಕ್ಷ ಶರತ್ ಅಂಬಾಳಿ ಮಾತನಾಡಿದರು. ಬಿಬಿಎಂಪಿ ಸದಸ್ಯರಾದ ಗೀತಾ ವಿವೇಕಾನಂದ, ಎನ್. ವೀರಣ್ಣ, ಆರ್.ಮಂಜಳಾ ದೇವಿ, ಸುಕುಮಾರ್, ತೇಜಸ್ವಿನಿ ರಾಜು, ಸಿದ್ಧಲಿಂಗಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry