ಯುಪಿಎ ಸರ್ಕಾರ ಶೀಘ್ರ ಪತನ

7

ಯುಪಿಎ ಸರ್ಕಾರ ಶೀಘ್ರ ಪತನ

Published:
Updated:

ಕೋಲ್ಕತ್ತ(ಐಎಎನ್‌ಎಸ್): ಮನಮೋಹನ ಸಿಂಗ್ ಅವರ ಸರ್ಕಾರ ಈಗ ಗಂಭೀರ ಸ್ಥಿತಿಗೆ ತಲುಪಿದ್ದು ಮುಂದಿನ ಎರಡರಿಂದ ಆರು ತಿಂಗಳ ಒಳಗಾಗಿ ಪತನವಾಗಲಿದೆ.  ಯಾವ ಪವಾಡವೂ ಈ ಸರ್ಕಾರವನ್ನು ಉಳಿಸಲು ಸಾಧ್ಯವಾಗದು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಈ ಸರ್ಕಾರ ಹೆಚ್ಚು ಅಂದರೆ 6 ತಿಂಗಳ ಕಾಲ ಇರಬಹುದು, ಆ ನಂತರ ಲೋಕಸಭೆ ಚುನಾವಣೆ ನಡೆಯುವುದು ಖಚಿತವಾಗಿದ್ದು ತಮ್ಮ ನಿರೀಕ್ಷೆ ಸುಳ್ಳಾಗಲಿಕ್ಕಿಲ್ಲ ಎಂದು ಮಮತಾ, ಹೊಸ ಬಂಗಾಳಿ ದಿನಪತ್ರಿಕೆ `ಈ ಸಮಯ~ಗೆ ನೀಡಿದ ಸಂದರ್ಶನದಲ್ಲಿ ಹೇಳಿದಿದ್ದಾರೆ. ಯುಪಿಎ ಸರ್ಕಾರದ ಏಕಮುಖ ಧೋರಣೆ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಸಂಘಟಿಸುವುದು ತಮ್ಮ ಈಗಿನ ಗುರಿಯಾಗಿದ್ದು, ಮುಂದಿನ ಸರ್ಕಾರವನ್ನು ಪ್ರಾದೇಶಿಕ ಪಕ್ಷಗಳೇ ರಚಿಸಲಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry