ಯುಪಿಡಿಎಫ್ ಮುಖ್ಯಸ್ಥನ ಬಂಧನ

7

ಯುಪಿಡಿಎಫ್ ಮುಖ್ಯಸ್ಥನ ಬಂಧನ

Published:
Updated:

ಇಟಾನಗರ(ಪಿಟಿಐ): ಯುನೈಟೆಡ್ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್‌ನ (ಯುಪಿಡಿಎಫ್) ಸ್ವಯಂ ಘೋಷಿತ ಕಮಾಂಡರ್ ಹಾಗೂ ಆತನ ಆರು ಸಹಚರರನ್ನು ಶಸ್ತ್ರಾಸ್ತ್ರ ಸಹಿತವಾಗಿ ಅರುಣಾಚಲ ಪ್ರದೇಶದ ಮಿಮಿ ಗ್ರಾಮದಲ್ಲಿ ಬಂಧಿಸಲಾಗಿದೆ. ಅಸ್ಸಾಂ ರೆಜಿಮೆಂಟ್ ಹಾಗೂ ರಾಜ್ಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಯುಪಿಡಿಎಫ್ ಮುಖ್ಯಸ್ಥ ಸುಮ್ನಾ ಮುಂಗ್‌ಲಂಗ್ ಮತ್ತು ಆರು ಉಗ್ರಗಾಮಿಗಳನ್ನು ಸೋಮವಾರ ಲೋಹಿತ್ ಜಿಲ್ಲೆಯ ಗ್ರಾಮದಲ್ಲಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry