'ಯುಪಿಯ ಮೋದಿಯಾಗಲು ಮುಲಾಯಂ ಯತ್ನ'

7

'ಯುಪಿಯ ಮೋದಿಯಾಗಲು ಮುಲಾಯಂ ಯತ್ನ'

Published:
Updated:

ಗಾಜಿಯಾಬಾದ್ (ಪಿಟಿಐ): ಹಿಂಸಾಚಾರದಿಂದ ತತ್ತರಿಸಿದ ಮುಜಾಫರ್ ನಗರದ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲವಾದ   ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಆರ್‌ಎಲ್‌ಡಿ ಮುಖ್ಯಸ್ಥ  ಅಜಿತ್ ಸಿಂಗ್, `ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ನರೇಂದ್ರ ಮೋದಿ'ಯಾಗಿದ್ದಾರೆ ಎಂದು ಗುರುವಾರ  ಟೀಕಿಸಿದ್ದಾರೆ.

ತಮ್ಮ ಕ್ಷೇತ್ರ ಬಾಗ್ಫತ್ ಪರಿಸ್ಥಿತಿ ಅವಲೋಕನಕ್ಕೆ ತೆರಳುತ್ತಿದ್ದಾಗ ಲೋನಿ ಎಂಬಲ್ಲಿ ಪೊಲೀಸರ ವಶಕ್ಕೆ ಒಳಗಾದ ವೇಳೆ ಅಜಿತ್ ಸಿಂಗ್, `ರಾಜ್ಯದಲ್ಲಿನ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನಿಸ್ಸಂದೇಹವಾಗಿ ಸಮಾಜವಾದಿ ಪಕ್ಷದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆಯೇ...? ಆಗಲೇ ಹಿಂಸಾಚಾರ ನಿಲ್ಲಬೇಕಿತ್ತು' ಎಂದಿದ್ದಾರೆ.

ಅಲ್ಲದೇ `ಮುಲಾಯಂ ಉತ್ತರ ಪ್ರದೇಶದ ನರೇಂದ್ರ ಮೋದಿಯಾಗಿದ್ದಾರೆ' ಎಂದು ನಾಗರಿಕ ವಿಮಾನಯಾನ ಸಚಿವರೂ ಆಗಿರುವ ಅಜಿತ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry