ಯುಪಿಸಿಎಲ್: ದರ ಏರಿಕೆ ರದ್ದುಪಡಿಸಿ ಆದೇಶ

7

ಯುಪಿಸಿಎಲ್: ದರ ಏರಿಕೆ ರದ್ದುಪಡಿಸಿ ಆದೇಶ

Published:
Updated:

ಪಡುಬಿದ್ರಿ: ಯುಪಿಸಿಎಲ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ಗೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಹೆಚ್ಚುವರಿ ದರ ನಿಗರಿಪಡಿಸಿರುವುದನ್ನು ನವದೆಹಲಿಯ ವಿದ್ಯುತ್ ತಗಾದೆಗಳ ಕುರಿತಾದ ಅಪಲೆಟ್ ಟ್ರುಬುನೆಲ್ ರದ್ದುಗೊಳಿಸಿದೆ. ಈ ಹಿನ್ನಲೆಯಲ್ಲಿ ಯುಪಿಸಿಎಲ್‌ಗೆ ಈ ಮೂಲಕ ಭಾರೀ ಹಿನ್ನಡೆಯಾಗಿದೆ.ವಿದ್ಯುತ್ ಖರೀದಿ ಒಪ್ಪಂದದಲ್ಲಿ ಕಂಪೆನಿಯಿಂದ ಉತ್ಪಾದನೆಯಾಗುವ ವಿದ್ಯುತ್‌ಗೆ ರೂ.

2.24ನಿಗದಿಪಡಿಸಲಾಗಿತ್ತು. ಆದರೆ ಈ ವೇಳೆ ಕಂಪನಿಯು ಎಸ್ಕಾಂನಲ್ಲಿ ಯಾವುದೇ ಒಪ್ಪಂದ ಮಾಡದೆ ಕೇಂದ್ರಿಯ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದು ಸುಮಾರು ರೂ. 5 ನಿಗದಿ ಪಡಿಸಲಾಗಿತ್ತು.

ಇದರಿಂದ ಎಸ್ಕಾಂಗೆ 625 ಕೋಟಿ ರೂ. ಹೆಚ್ಚುವರಿ ಹೊರೆಯಾಗಿತ್ತು.ಇದನ್ನು ಪ್ರತಿಭಟಿಸಿ ಎಸ್ಕಾಂ ನವದೆಹಲಿಯ ವಿದ್ಯುತ್ ತಗಾದೆಗಳ ಕುರಿತಾದ ಅಪಲೆಟ್ ಟ್ರುಬುನೆಲ್‌ಗೆ ದೂರು ನೀಡಿತ್ತು. ಇದರಲ್ಲಿ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸುತ್ತಿರುವ ನಂದಿಕೂರು ಜನಜಾಗೃತಿ ಸಮಿತಿಯನ್ನು ಪ್ರತಿವಾದಿಯನ್ನಾಗಿಸಿತ್ತು.ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಸೆಪ್ಟಂಬರ್ 4ರಂದು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ ಅಪಲೆಟ್ ಟ್ರುಬುನೆಲ್ ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿ ಎಸ್ಕಾಂನೊಂದಿಗೆ ಮಾತುಕತೆ ನಡೆಸದೆ ದರ ಏರಿಕೆ ಮಾಡಿರುವ ಆದೇಶವನ್ನು ರದ್ದುಳಿಸಿತು.ಸ್ವಾಗತಾರ್ಹ: ಅಪಲೆಟ್ ಟ್ರುಬುನೆಲ್ ಆದೇಶವನ್ನು ನಂದಿಕೂರು ಜನಜಾಗೃತಿ ಸಮಿತಿ ಸ್ವಾಗತಿಸಿದೆ. ಯುಪಿಸಿಎಲ್ ಯೋಜನೆಯ ಇನ್ನೂ ಹಲವಾರು ಅಕ್ರಮಗಳನ್ನು ಬಯಲಿಗೆಳೆಯುವುದಾಗಿ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜಯಂತ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry