ಯುಪಿಸಿಎಲ್: ವಿದ್ಯುತ್ ಉತ್ಪಾದನೆ ಸ್ಥಗಿತ

7

ಯುಪಿಸಿಎಲ್: ವಿದ್ಯುತ್ ಉತ್ಪಾದನೆ ಸ್ಥಗಿತ

Published:
Updated:

ಪಡುಬಿದ್ರಿ: ನಂದಿಕೂರಿನಲ್ಲಿರುವ ಉಡುಪಿ ಪವರ್ ಕಾರ್ಪೊರೇಷನ್ ಲಿ.(ಯುಪಿಸಿಎಲ್) ಘಟಕ ಶುಕ್ರವಾರ ರಾತ್ರಿಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಇದೇ ಪರಿಸ್ಥಿತಿ ಒಂದೆರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.`ಅ. 7ರಿಂದ ಒಂದು ತಿಂಗಳ ಕಾಲ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಈವರೆಗೆ ಯುಪಿಸಿಎಲ್ ವಿದ್ಯುತ್ ಸ್ಥಾವರದಲ್ಲಿ 600 ಮೆ.ವಾ. ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ವಿದ್ಯುತ್ ಖರೀದಿಸುತ್ತಿದ್ದ ಮೆಸ್ಕಾಂ ಅದನ್ನು ಉಡುಪಿ ಹಾಗೂ ಮಂಗಳೂರಿಗೆ ಸರಬರಾಜು ಮಾಡುತ್ತಿತ್ತು~ ಎಂದು ಕಂಪೆನಿ ಈ ಮೊದಲೇ ಹೇಳಿಕೊಂಡಿತ್ತು. ಕ್ರವಾರದಿಂದ ಪಡುಬಿದ್ರಿ ಸುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.`ನಿರ್ವಹಣಾ ಕಾರ್ಯಕ್ಕಾಗಿ ಯುಪಿಸಿಎಲ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಒಂದು ಅಥವಾ ಎರಡು ತಿಂಗಳ ಕಾಲ ನಿರ್ವಹಣಾ ಕಾರ್ಯ ನಡೆಯುವ ಸಾಧ್ಯತೆ ಇದೆ. ಈಗ ಬೇರೆ ಗ್ರಿಡ್‌ನಿಂದ ವಿದ್ಯುತ್ ಪಡೆದು ಪೂರೈಸಲಾಗುತ್ತಿದೆ~ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry