ಯುಪಿಸಿಎಲ್ 2ನೇ ಘಟಕ ಪ್ರಾಯೋಗಿಕ ಕಾರ್ಯಾರಂಭ
ಪಡುಬಿದ್ರಿ: ಇಲ್ಲಿನ ಯುಪಿಸಿಎಲ್ ವಿದ್ಯುತ್ ಸ್ಥಾವರದ ಎರಡನೇ ಹಂತದ 600 ಮೆಗಾವಾಟ್ ಸಾಮರ್ಥ್ಯದ ಘಟಕವು ಬುಧವಾರ ಪ್ರಾಯೋಗಿಕ ವಿದ್ಯುತ್ ಉತ್ಪಾದನೆ ಆರಂಭಿಸಿದೆ.
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉಡುಪಿ ಪವರ್ ಕಾರ್ಪೊರೇಶನ್ ಮೊದಲ ಹಂತದಲ್ಲಿ ಒಂದೂವರೆ ವರ್ಷ ಹಿಂದೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭಿಸಿತ್ತು. ಆ ಬಳಿಕ ಕಂಪೆನಿಯಿಂದ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ರೈತ ಸಂಘ, ನಂದಿಕೂರು ಜನಜಾಗೃತಿ ಸಮಿತಿಯು ಹೋರಾಟ ನಡೆಸಿತ್ತು. ಅಲ್ಲದೆ ಎರಡನೇ ಘಟಕಕ್ಕೆ ಅನುಮತಿ ನೀಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿತ್ತು.
ಇದೇ ವೇಳೆ 2ನೇ ಹಂತದ 600 ಮೆವಾ ವಿದ್ಯುತ್ ಉತ್ಪಾದನೆಗೆ ಸರ್ಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಸ್ಥಳೀಯರ ವಿರೋಧದಿಂದಾಗಿ ಸರ್ಕಾರ ಅನುಮತಿ ನೀಡಲು ವಿಳಂಬ ಮಾಡಿತ್ತು ಇದೀಗ ಅನುಮತಿ ದೊರೆತಿದ್ದು, 2ನೇ ಘಟಕ ಪ್ರಾಯೋಗಿಕ ಕಾರ್ಯಾರಂಭಗೊಂಡಿದೆ. ಇದೇ 12ರಂದು ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡುವುದಾಗಿ ಕಂಪೆನಿ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.