ಯುಬಿ ಫೋರ್ಸ್

7

ಯುಬಿ ಫೋರ್ಸ್

Published:
Updated:

ದೆಹಲಿ ಬಳಿಯ ಗ್ರೇಟರ್ ನೊಯ್ಡಾದಲ್ಲಿ ಭಾನುವಾರ ನಡೆಯುವ ಫಾರ್ಮುಲಾ 1 ಗ್ರಾನ್‌ಪ್ರಿ ಮೋಟಾರ್ ಪಂದ್ಯ ಭಾರತದ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆಯಲಿದೆ. ಏಕೆಂದರೆ ಇದು ಭಾರತೀಯ ನೆಲದಲ್ಲಿನ ಮೊದಲ ಫಾರ್ಮುಲಾ ಸ್ಪರ್ಧೆ. ಈ ಬಾರಿ ಭಾರತದ ಪರವಾಗಿ ಕಿಂಗ್‌ಫಿಷರ್ ಸಹಯೋಗದ ಸಹಾರ ಫೋರ್ಸ್ ಇಂಡಿಯಾ ತಂಡ ಪಾಲ್ಗೊಳ್ಳುತ್ತಿದೆ.ಈ ರೋಮಾಂಚನಕ್ಕೆ ಪೂರ್ವಭಾವಿಯಾಗಿ ಕಿಂಗ್‌ಫಿಷರ್ ಹೊರತಂದ ಮದ್ಯದ ವಿಶೇಷ ಕ್ಯಾನ್‌ಗಳನ್ನು ಬಿಡುಗಡೆ ಮಾಡಲು ಸಹರಾ ಫೋರ್ಸ್ ಇಂಡಿಯಾ ತಂಡದ ಚಾಲಕ ನಿಕೊ ಹುಕೆನ್‌ಬರ್ಗ್ ಬಂದಿದ್ದರು.ಪಂದ್ಯದಲ್ಲಿ ಗೆಲ್ಲುವ ಪ್ರಯತ್ನ ಮಾಡುವುದಾಗಿ ಹೇಳಿದರು. ಸಾಕಷ್ಟು ಶ್ರಮ ಪಡಬೇಕಿದೆ, ಫಲಿತಾಂಶ ಏನೇ ಬಂದರು ಮುಕ್ತ ಮನಸ್ಸಿನಿಮಧ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry