ಸೋಮವಾರ, ಮೇ 17, 2021
22 °C

ಯುಬಿ ಸಿಟಿಯಲ್ಲಿ ವಿವಾಹ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಠಲ ಮಲ್ಯ ರಸ್ತೆಯಲ್ಲಿರುವ ಬೆಂಗಳೂರಿನ ವಿಲಾಸಿ ಜೀವನಶೈಲಿ ಮತ್ತು ಫ್ಯಾಷನ್ ಕೇಂದ್ರ ಯುಬಿ ಸಿಟಿಯ  ದಿ ಕಲೆಕ್ಷನ್‌ನಲ್ಲಿ ಆಡಿ ಕಾರ್ ಸಹಯೋಗದಲ್ಲಿ ಬುಧವಾರದಿಂದ ಅ. 2ರ ವರೆಗೆ `ಟ್ರುಸೋ~ ವಿವಾಹ ಉತ್ಸವ ನಡೆಯಲಿದೆ.ಪರಿಣಿತರು ಇಲ್ಲಿ ವಿವಾಹ ಸಮಾರಂಭದ ಸಿದ್ಧತೆ, ಆಯೋಜನೆ, ವಿನ್ಯಾಸ ಮತ್ತು ಸಲಹೆಗಳನ್ನು ನೀಡಲಿದ್ದಾರೆ. ಮದುವಣಗಿತ್ತಿಯ ಉಡುಗೆ, ಆಭರಣ ಮತ್ತು ಅಲಂಕಾರ, ವಿಶೇಷ ವಿವಾಹ ಸೇವೆಗಳ ಮಾಹಿತಿಯೂ ಲಭ್ಯ.ಅಂತಾರಾಷ್ಟ್ರೀಯ ಬ್ರಾಂಡ್‌ಗಳು, ಪ್ರಖ್ಯಾತ ವಿನ್ಯಾಸಕಾರರ ವಿನ್ಯಾಸದ ಉಡುಗೆ ತೊಡುಗೆಗಳು, ಹೊಸ ಆಭರಣಗಳು, ವೃತ್ತಿಪರ ಸಲಹೆ ಹೀಗೆ ವಿವಾಹಕ್ಕೆ ಸಂಬಂಧಿಸಿದ ಪ್ರದರ್ಶನ ಇದು.ಪುಷ್ಪಾಲಂಕಾರ, ವಿವಾಹ ಆಮಂತ್ರಣ ಪತ್ರಿಕೆಗಳ ವಿನ್ಯಾಸಕಾರರು, ಫೋಟೋಗ್ರಾಫರ್‌ಗಳು ಮತ್ತು ಮನೋರಂಜನಾ ಸಂಸ್ಥೆಗಳ ಮಳಿಗೆಗಳು ಇಲ್ಲಿರುತ್ತವೆ. ಈ ಅವಧಿಯಲ್ಲಿ ದಿ ಕಲೆಕ್ಷನ್‌ನಲ್ಲಿ ಪ್ರಖ್ಯಾತ ಅಂತಾರಾಷ್ಟ್ರೀಯ ಬ್ರಾಂಡ್‌ಗಳು ನಾಲ್ಕು ದಿನಗಳವರೆಗೆ ವಿಶೇಷ ಕೊಡುಗೆಗಳನ್ನು ನೀಡಲಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.