ಗುರುವಾರ , ಮೇ 19, 2022
20 °C

ಯುರೇನಿಯಂ ಘಟಕ ಸ್ಥಾಪನೆ: ನೋಟಿಸ್ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಯುರೇನಿಯಂ ಕಾರ್ಪೋ ರೇಶನ್ ಆಫ್ ಇಂಡಿಯಾ ಸಂಸ್ಥೆಯು ಗೋಗಿ ಯುರೇನಿಯಂ ಯೋಜನೆ ಅಡಿಯಲ್ಲಿ  ಗಣಿಯಿಂದ ಆರು ಕಿ.ಮೀ ದೂರದಲ್ಲಿರುವ ದಿಗ್ಗಿ, ಸೈದಾಪೂರ, ಉಮರದೊಡ್ಡಿ ಗ್ರಾಮದ ಮೂರು ಗಡಿ ಸಂಗಮ ಪ್ರದೇಶದಲ್ಲಿ ಅದಿರು ಸಂಸ್ಕರಣಾ ಘಟಕ ಸ್ಥಾಪನೆಗಾಗಿ ಕಂದಾಯ ಇಲಾಖೆಯು  ಭೂ ಸ್ವಾಧೀನ ಪ್ರಕ್ರಿಯೆ ಅಂಗವಾಗಿ 4 (1) ನೋಟಿಸಿ ಜಾರಿ ಮಾಡಿದ ಅಂಶ ಬೆಳಕಿಗೆ ಬಂದಿದೆ.ಮೂರು ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಎಕರೆ ಭೂಮಿ ವಶಪಡಿಸಿ ಕೊಳ್ಳುವ ಉದ್ದೇಶಕ್ಕಾಗಿ 48ಕ್ಕೂ ಹೆಚ್ಚು ರೈತರಿಗೆ ಭೂಸ್ವಾಧೀನಕ್ಕಾಗಿ 4(1) ನೋಟಿಸು ನೀಡಲಾಗಿದೆ ಎಂದು ನೋಟಿಸು ಪಡೆದುಕೊಂಡಿರುವ ಮಲ್ಲಿಕಾರ್ಜುನ ಕರಿಗುಡ್ಡ ಹಾಗೂ ಅವರ ಕುಟುಂಬದವರು  ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಗೋಗಿ ಗ್ರಾಮದಲ್ಲಿ ಸ್ಥಾಪಿಸಲಾಗಿ ರುವ ಯುರೇನಿಯಂ ಗಣಿಗಾರಿಕೆಗಾಗಿ ಮೂರು ಗ್ರಾಮಗಳ ಪ್ರದೇಶ ಗಡಿ ಕೇಂದ್ರದಲ್ಲಿ  ಜಲ- ಲೋಹ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಯುರೇನಿಯಂ ಅನ್ನು ಅದಿರಿನಿಂದ ಸೋಡಿಯಂ-ಡೈ- ಯುರೇನೇಟ್ (ಎಸ್.ಡಿ.ಯು) ರೂಪ ದಲ್ಲಿ ಬೇರ್ಪಡಿಸುವ ಸಲುವಾಗಿ ಖನಿಜ ಸಂಸ್ಕರಣ ಘಟಕವು ಸ್ಥಾಪನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ’.ಮೂರು ಗ್ರಾಮದ ರೈತರು ಆತಂಕ ಗೊಂಡಿದ್ದಾರೆ ಕಂದಾಯ ಇಲಾಖೆಯ ವರು ನೋಟಿಸಗಳನ್ನು ಜಾರಿ ಮಾಡಿ ಹಿಂಬರಹದಲ್ಲಿ ಸಹಿ ಹಾಗೂ ಹೆಬ್ಬಟ್ಟಿನ ಗುರುತು ಪಡೆದುಕೊಂಡಿದ್ದಾರೆ. ಭೂ ಪರಿಹಾರ ಹಾಗೂ ಇದರ ಸಾಧಕ ಬಾಧಕ ನಮಗೆ ಗೊತ್ತಿಲ್ಲ ಮೇಲಾಧಿ ಕಾರಿಗಳ ಆದೇಶದ ಪ್ರಕಾರ ನೋಟಿಸು ಜಾರಿ ಮಾಡಿದ್ದೇವೆ. ಹೆಚ್ಚಿನ ವಿವರ ಬೇಕಾದರೆ ಜಿಲ್ಲಾಧಿಕಾರಿಯವರಿಗೆ ಭೇಟಿಯಾಗಿ ಎಂದು ಹೇಳುತ್ತಿದ್ದಾರೆ ಎಂದು ರೈತ ಹಣಮಂತ ದೂರಿದ್ದಾರೆ.ಹೆಚ್ಚಾಗಿ ಮೂರು ಗ್ರಾಮಗಳಲ್ಲಿ ಹಿಂದುಳಿದ ಕುರುಬ, ಕೋಲಿ, ಸಮುದಾಯದವರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ತಲೆತಲೆ ಮಾರಿನಿಂದ ಇದೇ ಜಮೀನು ನಂಬಿ ಬದುಕು ಸಾಗಿಸುತ್ತಿದ್ದ ಬಡ ಕುಟುಂಬ ಗಳಿಗೆ ಅಘಾತವಾಗಿದೆ. ಭೂ ಪ್ರಸ್ತಾವನೆ ಹಾಗೂ ಪರಿಹಾರದ ಬಗ್ಗೆ ಸಮರ್ಪಕವಾಗಿ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಎಲ್ಲವು ಗೌಪ್ಯ ಎನ್ನುತ್ತಲೆ ರೈತರನ್ನು ವಂಚಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜನ ಕಿರಗುಡ್ಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ರೈತರ ಸಭೆ ಕರೆದು ಸಂಶಯ ಹಾಗೂ ಗೊಂದಲ ಗಳನ್ನು ನಿವಾರಿಸಬೇಕೆಂದು ಕರಿಗುಡ್ಡ ಮನವಿ ಮಾಡಿದ್ದಾರೆ.ರೈತರಲ್ಲಿ ಮನೆ ಮಾಡಿರುವ ಆತಂಕ ದೂರಮಾಡಬೇಕು, ಸೂಕ್ತ ಮಾಹಿತಿ ನೀಡಬೇಕು ಎಂಬ ಬೇಡಿಕೆ ರೈತರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.