ಭಾನುವಾರ, ಡಿಸೆಂಬರ್ 8, 2019
24 °C

ಯುರೇನಿಯಂ: ಭಾರತದ ಮನವಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುರೇನಿಯಂ: ಭಾರತದ ಮನವಿ ತಿರಸ್ಕೃತ

ಮೆಲ್ಬರ್ನ್ (ಪಿಟಿಐ): ಭಾರತಕ್ಕೆ ಯುರೇನಿಯಂ ಮಾರಾಟ ಮಾಡು ವುದಿಲ್ಲ ಎಂಬ ನಿಲುವನ್ನು ಬದಲಾಯಿಸಬೇಕೆಂದು ಭಾರತ ಮತ್ತೆ ಮಾಡಿದ ಕೋರಿಕೆಯನ್ನು ಆಸ್ಟ್ರೇ ಲಿಯಾ ನಿರಾಕರಿಸಿದ್ದು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂ ದ(ಎನ್‌ಪಿಟಿ)ಕ್ಕೆ ಸಹಿ ಹಾಕದ ದೇಶಗಳಿಗೆ ಯುರೇನಿಯಂ ಮಾರಾಟ ಮಾಡುವುದಿಲ್ಲ ಎಂಬ ತನ್ನ ನೀತಿಯೊಂದಿಗೆ ಬಿಗಿ ಪಟ್ಟು ಹಿಡಿದು ನಿಂತಿದೆ.ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರುವ  ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ತಮ್ಮ ಸಹವರ್ತಿ ಕೆವಿನ್ ರುಡ್ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಮತ್ತೆ ಈ ಮನವಿಯನ್ನು ಮಾಡಿಕೊಂಡಿದ್ದರೂ ಕೂಡ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಕೆವಿನ್ ಸ್ಪಷ್ಟಪಡಿಸಿದರು.ಕೃಷ್ಣ ಅವರು ಸಂಪನ್ಮೂಲ, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಮಾರ್ಟಿನ್ ಫರ್ಗ್ಯೂಸನ್ ಅವರನ್ನು ಬುಧವಾರ ಭೇಟಿ ನಡೆಸಿದ್ದ ವೇಳೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು.ಅಣ್ವಸ್ತ್ರ ಪ್ರಸರಣ ಕುರಿತಂತೆ ಭಾರತದ ಸ್ಪಷ್ಟ ನೀತಿಗೆ ರುಡ್ ಸಮ್ಮತಿ ವ್ಯಕ್ತಪಡಿಸಿದರೂ ಕೂಡ ಎನ್‌ಪಿಟಿಗೆ ಸಹಿ ಹಾಕದ ದೇಶಗಳಿಗೆ ಯುರೇನಿಯಂ ಮಾರಾಟ ಮಾಡದೇ ಇರುವುದು ತಮ್ಮ ರಾಷ್ಟ್ರದ ನೀತಿಯಾಗಿದೆ ಎಂದು ಸ್ಪಷ್ಟಪಡಿಸಿದರು.ಆದರೆ, ಯುರೇನಿಯಂ ವಿಷಯದಿಂದ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದರು. ‘ಎನ್‌ಪಿಟಿ ಕುರಿತ ಆಸ್ಟ್ರೇಲಿಯಾದ ನಿಲುವು ಬದಲಾಗದು. ನಾವು ಇನ್ನು ಮುಂದೆಯೂ ಈ ಕುರಿತು ಸ್ನೇಹಿತರಂತೆ ಮಾತುಕತೆ ನಡೆಸುತ್ತೇವೆ’ ಎಂದು ರುಡ್ ಹೇಳಿದರು.

ಪ್ರತಿಕ್ರಿಯಿಸಿ (+)