ಮಂಗಳವಾರ, ಮೇ 24, 2022
30 °C

ಯುರೇನಿಯಂ ರಫ್ತಿನ ಮೇಲೆ ಪರಿಣಾವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಭೂಕಂಪ ಮತ್ತು ಸುನಾಮಿ ಸಂತ್ರಸ್ತ ಜಪಾನಿನಲ್ಲಿ ಉಂಟಾಗಿರುವ ಪರಮಾಣು ಬಿಕ್ಕಟ್ಟು ದೇಶದ ಯುರೇನಿಯಂ ರಫ್ತು ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಭಾನುವಾರ ಹೇಳಿದ್ದಾರೆ. ‘ಯುರೇನಿಯಂ ರಫ್ತಿನ ಕುರಿತ ನನ್ನ ಚಿಂತನೆಗಳ ಮೇಲೆ ಜಪಾನಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪ್ರಭಾವ ಬೀರದು.

 

ನಾವು ಯುರೇನಿಯಂ ರಫ್ತು ವ್ಯವಹಾರವನ್ನು ಮುಂದುವರೆಸುತ್ತೇವೆ’ ಎಂಬ ಗಿಲ್ಲಾರ್ಡ್ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.‘ಭಾರತಕ್ಕೆ ಈಗಾಗಲೇ ಮಾಡುತ್ತಿರುವ ಯುರೇನಿಯಂ ಮಾರಾಟವನ್ನು ಸ್ಥಗಿತಗೊಳಿಸುವುದರ ಬಗ್ಗೆ  ನಾವು ಮರು ಚಿಂತನೆ ನಡೆಸಿಲ್ಲ’ ಎಂದೂ ಅವರು ಹೇಳಿದ್ದಾರೆ. ಪರಮಾಣು ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಆಸ್ಟ್ರೇಲಿಯಾ ಬಳಸದಿದ್ದರೂ ಯುರೇನಿಯಂ ಉತ್ಪಾದನೆಯಲ್ಲಿ ಕಜಕಿಸ್ತಾನ ಮತ್ತು ಕೆನಡಾದ ಬಳಿಕ ವಿಶ್ವದಲ್ಲೇ ಅದು ಮೂರನೇ ಸ್ಥಾನದಲ್ಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.