ಯುರೇನಿಯಂ ಸುರಕ್ಷತಾ ಒಪ್ಪಂದ ನಿರೀಕ್ಷೆ

7

ಯುರೇನಿಯಂ ಸುರಕ್ಷತಾ ಒಪ್ಪಂದ ನಿರೀಕ್ಷೆ

Published:
Updated:

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ಪ್ರಧಾನಿ ಜ್ಯುಲಿಯಾ ಗಿಲ್ಲಾರ್ಡ್ ಮುಂದಿನ ವಾರ ನವದೆಹಲಿಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಯುರೇನಿಯಂ ಸುರಕ್ಷತಾ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆಯಿದೆ.ಈ ಒಪ್ಪಂದದ ನಂತರ ಆಸ್ಟ್ರೇಲಿಯಾ ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲಿದೆ. ಜಗತ್ತಿನ ಒಟ್ಟು ಯುರೇನಿಯಂ ನಿಕ್ಷೇಪದ ಶೇ 31ರಷ್ಟು ಆಸ್ಟ್ರೇಲಿಯಾದಲ್ಲೇ ಇದ್ದು, ಅದು ಅತಿದೊಡ್ಡ ಯುರೇನಿಯಂ ಉತ್ಪಾದಕ ದೇಶವಾಗಿದೆ. ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ ನಡುವೆಯೂ ಭಾರತಕ್ಕೆ ಯುರೇನಿಯಂ ಪೂರೈಸಲು ಗಿಲ್ಲಾರ್ಡ್ ಸರ್ಕಾರ ನಿರ್ಧರಿಸಿದೆ.ಮೂರು ದಿನಗಳ ಭೇಟಿಗಾಗಿ ಗಿಲ್ಲಾರ್ಡ್ ಸೋಮವಾರ ದೆಹಲಿಗೆ ಬರಲಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಹಿರಿಯ ಸಚಿವರನ್ನು ಭೇಟಿಯಾಗಲಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಸಹ ಜ್ಯುಲಿಯಾ ಭೇಟಿಯಾಗಿ ಮಾತುಕತೆ ನಡೆಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry