ಯುರೋಪಿನಾದ್ಯಂತ ದಾಳಿಗೆ ಅಲ್ ಖೈದಾ ಯೋಜನೆ: ನಗ್ನ ವಿಡಿಯೋ ಒಳಗೆ ರಹಸ್ಯ ದಾಖಲೆ!

7

ಯುರೋಪಿನಾದ್ಯಂತ ದಾಳಿಗೆ ಅಲ್ ಖೈದಾ ಯೋಜನೆ: ನಗ್ನ ವಿಡಿಯೋ ಒಳಗೆ ರಹಸ್ಯ ದಾಖಲೆ!

Published:
Updated:
ಯುರೋಪಿನಾದ್ಯಂತ ದಾಳಿಗೆ ಅಲ್ ಖೈದಾ ಯೋಜನೆ: ನಗ್ನ ವಿಡಿಯೋ ಒಳಗೆ ರಹಸ್ಯ ದಾಖಲೆ!

ವಾಷಿಂಗ್ಟನ್ (ಐಎಎನ್ಎಸ್): 2008ರ ನವೆಂಬರ್ ನಲ್ಲಿ ಮುಂಬೈಯಲ್ಲಿ ನಡೆಸಲಾದ ಮಾದರಿಯ ದಾಳಿಗಳನ್ನು ಯುರೋಪಿನಾದ್ಯಂತ ನಡೆಸಲು ಅಲ್ ಖೈದಾ ಯೋಜಿಸಿದ್ದುದನ್ನು ಮೆಮೋರಿ ಡಿಸ್ಕ್ ನಲ್ಲಿನ ನಗ್ನ ಚಲನಚಿತ್ರಗಳ ಒಳಗೆ ಅವಿತಿಡಲಾದ ಅಲ್ ಖೈದಾ ಸಂಘಟನೆಯ ನೂರಾರು ದಾಖಲೆಗಳು ಬೆಳಕಿಗೆ ತಂದಿವೆ.ಜರ್ಮನ್, ಇಂಗ್ಲಿಷ್ ಮತ್ತು ಅರಬ್ಬಿ ಭಾಷೆಗಳಲ್ಲಿ ಪಿಡಿಎಫ್ ರೂಪದಲ್ಲಿರುವ ಭಯೋತ್ಪಾದಕ ತರಬೇತಿ ಕೈಪಿಡಿಗಳನ್ನು ಈ ರೀತಿಯಲ್ಲಿ ಅವಿತಿಡಲಾಗಿದ್ದ ದಾಖಲೆಗಳು ಲಭ್ಯವಾಗಿವೆ ಎಂದು ಜಾಗೃತಾ ಮೂಲಗಳನ್ನು ಉಲ್ಲೇಖಿಸಿ ಸಿಎನ್ ಎನ್ ವರದಿ ಮಾಡಿದೆ. ಈ ಎಲ್ಲ ದಾಖಲೆಗಳ ವಿವರ ತನಗೆ ಲಭ್ಯವಾಗಿದೆ ಎಂದೂ ಅದು ಹೇಳಿದೆ.ಬರ್ಲಿನ್ ನಲ್ಲಿ ಕಳೆದ ವರ್ಷ ಶಂಕಿತ ಅಲ್ ಖೈದಾ ಕಾರ್ಯಕರ್ತನೊಬ್ಬನನ್ನು ಬಂಧಿಸಿದಾಗ ಆತನ ಬಳಿ ಲಭಿಸಿದ ಮೆಮೋರಿ ಡಿಸ್ಕ್ ನಲ್ಲಿ ಪತ್ತೆಯಾಯಿತು ಎಂದು ಜರ್ಮನ್ ಪತ್ರಿಕೆ ~ಡೈ  ಝೀಟ್~~ ಮೊತ್ತ ಮೊದಲಿಗೆ ವರದಿ ಮಾಡಿತು.ಪಾಕಿಸ್ತಾನದಿಂದ ಇತ್ತೀಚೆಗೆ ಹಂಗೆರಿಯ ಬುಡಾಪೆಸ್ಟ್ ಮೂಲಕ  ಜರ್ಮನಿಗೆ ಬಂದ 22 ವರ್ಷದ ಮಕ್ಸೂದ್ ಲೋಡ್ವಿನ್ ಎಂಬ 22ರ ಹರೆಯದ ಯುವಕನನ್ನು ತನಿಖೆಗಾರರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ತನ್ನ ಒಳಚಡ್ಡಿಯ ಕಿಸೆಯಲ್ಲಿ ಇರಿಸಲಾಗಿದ್ದ ಡಿಜಿಟಲ್ ಸಂಗ್ರಹ ಸಾಧನ ಮತ್ತು ಮೆಮೋರಿ ಕಾರ್ಡ್ ನಲ್ಲಿ ಈ ದಾಖಲೆಗಳು ಇದ್ದುದನ್ನು ಕಂಡು ಈತ ಅಚ್ಚರಿಗೊಂಡಿದ್ದಾನೆ.~ಕಿಕ್ ಆಸ್~ ಎಂಬ ಹೆಸರಿನ ನಗ್ನ ವಿಡಿಯೋ ಒಳಗೆ ~ಸೆಕ್ಸೀ ಟಂಜಾ~ ಕಡತವನ್ನು ಅವಿತಿಡಲಾಗಿತ್ತು.

ಹಲವು ವಾರಗಳ ಬಳಿಕ ಈ ವಿಡಿಯೋ ಒಳಗೆ ಸುಮಾರು 100ಕ್ಕೂ ಹೆಚ್ಚು ಅಲ್ ಖೈದಾ ದಾಖಲೆಗಳು ಇದ್ದುದನ್ನು ಜರ್ಮನ್ ತನಿಖೆಗಾರರು ಪತ್ತೆ ಹಚ್ಚಿದರು ಎಂದು ಮೂಲಗಳು ಹೇಳಿವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry