ಸೋಮವಾರ, ಏಪ್ರಿಲ್ 19, 2021
24 °C

ಯುವಕರಲ್ಲಿ ಆಧ್ಯಾತ್ಮಿಕ ಚಿಂತನೆ ಕ್ಷೀಣ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ:  `ಆಧ್ಯಾತ್ಮಿಕ ಚಿಂತನೆ ಯುವಕರಲ್ಲಿ ಕ್ಷೀಣಿಸುತ್ತಿರುವುದರಿಂದ ಹಿರಿಯರು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಜಾಗೃತಿ ಮೂಢಿಸುವ ಕೆಲಸ ಮಾಡಬೇಕು~ ಎಂದು ರಾಮೋಹಳ್ಳಿ ಮಧ್ವನಾರಾಯಣಾಶ್ರಮದ ವಿಶ್ವಭೂಷಣತೀರ್ಥ ಸ್ವಾಮೀಜಿ ಕರೆ ನೀಡಿದರು.ಕೆಂಗೇರಿ ಬ್ರಾಹ್ಮಣ ಸಭಾವು ಕೃಷ್ಣಪ್ರಿಯ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ತ್ರಿ ದಶಮಾನೋತ್ಸವ ಹಾಗೂ ವಿಪ್ರ ಚಿಂತನಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಆಧ್ಯಾತ್ಮಿಕದಿಂದ ಮಾನಸಿಕ ನೆಮ್ಮದಿ, ಮನಃಶಾಂತಿ ದೊರೆಯುವುದರಿಂದ ಬದುಕಿನಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮನಸ್ಸು ಯಾವುದೇ ಪರಿಸ್ಥಿತಿಯಲ್ಲಿಯೂ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುವುದಿಲ್ಲ~ ಎಂದು ಅವರು ಹೇಳಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಆರ್.ಲಕ್ಷ್ಮೀಕಾಂತ್, ಶಿಕ್ಷಣ ತಜ್ಞ ಡಾ.ಪಿ.ಪುತ್ತೂರಾಯ, ಪಾಲಿಕೆ ಸದಸ್ಯ ರ.ಆಂಜನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘದ ಅಧ್ಯಕ್ಷ ಆರ್. ಪ್ರಕಾಶ್, ಸಭಾದ ಅಧ್ಯಕ್ಷ ಎಚ್.ಎಸ್. ಸುಧೀಂದ್ರಕುಮಾರ್ ಹಾಜರಿದ್ದರು.ನಾಗೇಂದ್ರರಾವ್ ಸ್ವಾಗತಿಸಿದರು. ಎ.ಎನ್.ಶಿವಸ್ವಾಮಿ ನಿರೂಪಿಸಿದರು. ಮುರಳೀಧರ್‌ಭಟ್ ಮತ್ತು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.