ಗುರುವಾರ , ಮೇ 13, 2021
16 °C

ಯುವಕರಿಗೆ ಉಪಾಧ್ಯಾಯರ ಜೀವನ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಸರಳ ಸಜ್ಜನಿಕೆ ಜೀವನ ಮಾದರಿಯಾಗಿದೆ ಎಂದು ಸಿದ್ಧಲಿಂಗ ಹಂಜಗಿ ಹೇಳಿದರು.ನಗರದ ಬಿ.ವಿ.ವಿ.ಸಂಘದ ಮಿನಿ ಸಭಾಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಉಪಾಧ್ಯಾಯರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಯುವ ಜನಾಂಗ ಹಾಗೂ ರಾಜಕಾರಣಿಗಳು ನಡೆಯಬೇಕು ಎಂದರು.ಅಟಲ್ ಬಿಹಾರಿ ವಾಜಪೇಯಿ ಅಂತಹ ಪ್ರಧಾನಿಯನ್ನು ದೇಶಕ್ಕೆ ಕೊಡಮಾಡಿದ ಈ ಪಕ್ಷ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಪಕ್ಷವನ್ನು ಕಟ್ಟಿದ ಪಂಡಿತ ದೀನದಯಾಳ್ ಅವರು ಇಂದಿನ ಜನಾಂಗಕ್ಕೆ ಮಾದರಿ ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪಂಡಿತ ದೀನದಯಾಳ್‌ರ ಸರಳ ಸಜ್ಜನಿಕೆ ಜೀವನ ಹಾಗೂ ಅವರ ಮಾರ್ಗದರ್ಶನದಂತೆ ನಡೆಯಬೇಕು ಎಂದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಸುಭಾಸ ಕೊಠಾರಿ, ನಗರ ಅಧ್ಯಕ್ಷ ಬಸವರಾಜ ಯಂಕಂಚಿ, ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಸದಾನಂದ ನಾರಾ, ಎಂ.ಎಸ್.ಮಠ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲಾವತಿ ರಾಜೂರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ, ಡಾ.ದಡ್ಡೇನವರ, ಜೆ.ಬಿ.ಬೂದಿಹಾಳ, ಕೇಶವ ಭಜಂತ್ರಿ, ಬಸವರಾಜ ನಾಶಿ, ನರೇಂದ್ರ ಕುಪ್ಪಸ್ತ, ರಾಜು ನಾಯಕರ ಮತ್ತಿತರರು ಉಪಸ್ಥಿತರಿದ್ದರು.ರೈತರ ಸಭೆ

ಬಾಗಲಕೋಟೆ:
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರೈತ ವೇದಿಕೆ ಜಿಲ್ಲಾ ಘಟಕದ ಸಹಯೋಗದೊಂದಿಗೆ ಇತ್ತೀಚೆಗೆ ರೈತರ ಸಭೆ ನಡೆಯಿತು. ನಗರಕ್ಕೆ ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿರುವ ಯಲ್ಲಾಲಿಂಗ  ಮಠದಲ್ಲಿ  ನಡೆದ ರೈತರ ಸಭೆಯಲ್ಲಿ ಬೀಜ ಗೊಬ್ಬರದ ಸಮಸ್ಯೆ, ನೀರಾವರಿ, ಭೂ ಪರಿಹಾರ, ಸರ್ಕಾರಿ ಸೌಲಭ್ಯ ಸೇರಿದಂತೆ ಮತ್ತಿತರ ವಿಷಯಗಳ ಕುರಿತಾಗಿ  ಚರ್ಚೆ ನಡೆಯಿತು.ಎಚ್.ಎನ್.ಮಾಸ್ತಿ, ಸಿದ್ದಪ್ಪ ತೆಗ್ಗಿ, ಹನಮಂತ ಸೊನ್ನದ, ಬಸವರಾಜ ಮುತ್ತಗಿ, ಬಸವರಾಜ ಕುರಿ, ಧರಿಯವ್ವ ಹುಣಸಿಕಲ್ಲ, ಶ್ರಿಕಾಂತಗೌಡ ಪಾಟೀಲ, ಕಾಸಿನಕುಂಟೆ, ಲಕ್ಕಪ್ಪ ಬೆಣ್ಣೂರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.