ಯುವಕರಿಗೆ ಹಣದ ಆಮಿಷ: ದಾರಿ ತಪ್ಪಿಸುತ್ತಿರುವ ಜೆಡಿಎಸ್

7

ಯುವಕರಿಗೆ ಹಣದ ಆಮಿಷ: ದಾರಿ ತಪ್ಪಿಸುತ್ತಿರುವ ಜೆಡಿಎಸ್

Published:
Updated:

ಕೆಂಗೇರಿ: `ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಯುವಕರಿಗೆ ಹಣದ ಆಮಿಷ ತೋರಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತ್ದ್ದಿದಾರೆ~ ಎಂದು ಕಾಂಗ್ರೆಸ್ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ದೂರಿದರು.ಕೆಂಗೇರಿಯ ಹೋಬಳಿ ಸೂಲಿಕೆರೆಯಲ್ಲಿ ಭಾನುವಾರ ನಡೆದ `ಕಾಂಗ್ರೆಸ್‌ಗೆ ಬನ್ನಿ- ಬದಲಾವಣೆ ತನ್ನಿ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಕರು ಕ್ಷಣಿಕ ಹಣಕ್ಕೆ ಆಸೆ ಬೀಳದೇ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.ಪಾಲಿಕೆ ಸದಸ್ಯ ರಾಜಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಬಿ.ಮುನಿರಾಜು, ಮುಖಂಡರಾದ ಶಾಂತಣ್ಣ, ರಾಮಮೂರ್ತಿ ಅನಿಲ್ ಕುಮಾರ್, ಕೆ.ಆರ್. ಮೂರ್ತಿ, ರೇಣುಕಪ್ಪ, ಲಕ್ಷ್ಮಯ್ಯ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry