ಯುವಕರ ಕಾರ್ಯ ಸ್ಮರಣೀಯ

ಶನಿವಾರ, ಮೇ 25, 2019
27 °C

ಯುವಕರ ಕಾರ್ಯ ಸ್ಮರಣೀಯ

Published:
Updated:

ರಾಣೆಬೆನ್ನೂರು: ನಮ್ಮಿಂದ ಸಾಧ್ಯ ವಾದಷ್ಟು ಬೇರೆಯವರ ಸೇವೆ ಮಾಡ ಬೇಕು, ಸಮಾಜದಿಂದ ಪಡೆದಿದ್ದನ್ನು ಪುನ; ಸಮಾಜಕ್ಕೆ ನೀಡಬೇಕು, ಪಕೃತಿ ಮತ್ತು ಸಮಾಜದಿಂದ ಪಡೆದಿದ್ದರಲ್ಲಿ ಸ್ವಲ್ಪ ಸಮಾಜದ ಋಣ ತೀರಿಸಬೇಕು, ಹಾಗೇಯೇ ಬಚ್ಚಿಟ್ಟುಕೊಂಡರೆ, ಮುಂದೊಂದು ದಿನ ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದ ಮಹಾರಾಜ್ ಹೇಳಿದರು.ವಿನಾಯಕನಗರದ ಕೇಲಗಾರ ಮಡಿಕಲ್ ಸೆಂಟರ್‌ನಲ್ಲಿ ಭಾನುವಾರ ಗಜಾನನ ಯುವಕ ಮಂಡಳಿ ಮೇಡ್ಲೇರಿ, ಷಣ್ಮುಗಾನಂದ ಸೇವಾ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಹಾವೇರಿ, ಗ್ರಾಸಿಂ ಜನಕಲ್ಯಾಣ ಟ್ರಸ್ಟ್ ಕುಮಾರಪಟ್ಟಣದ ಆಶ್ರಯದಲ್ಲಿ ಏರ್ಪಡಿಸಿದ್ದ 13ನೇ ವರ್ಷದ ವಿದ್ಯಾ ಗಣಪತಿ ಮಹೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಕಡುಬಡವರಿಗೆ ಉಚಿತ ಆಪರೇಶನ್ನಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಜಿಪಂ ಅಧ್ಯಕ್ಷ ಮಂಜುನಾಥ ಓಲೇಕಾರ ಅವರು ಮಾತನಾಡಿದರು.

ಷಣ್ಮುಗಾನಂದ ಟ್ರಸ್ಟ್ ಅಧ್ಯಕ್ಷ ಡಾ.ಬಸವರಾಜ ಕೇಲಗಾರ ಅವರು ಸಮುದಾಯ ಆಸ್ಪತ್ರೆಯಲ್ಲಿ ಮಹಿಳೆಯ ರಿಗೆ ಉಚಿತ ಮಕ್ಕಳ ಆಪರೇಶನ್ ಮಾಡುವ ಬಗ್ಗೆ, ಡಾ. ಚಂದ್ರಶೇಖರ ಕೇಲಗಾರ ಉಚಿತ ನೇತ್ರ ಚಿಕಿತ್ಸೆ ಮಾಡುವ ಬಗ್ಗೆ ತಿಳಿಸಿದರು.ಈ ಶಿಬಿರದಲ್ಲಿ 252 ಜನರಿಗೆ ನೇತ್ರ ತಪಾಸಣೆ ಮಾಡಿ 32 ಫಲಾನುಭವಿ ಗಳಿಗೆ ಆಪರೇಶನ್ ಮಾಡಿ, ಉಚಿತ ಔಷಧಿ, ಕನ್ನಡಕವನ್ನು ವಿತರಣೆ ಮಾಡ ಲಾಯಿತು.ಷಣ್ಮುಗಾನಂದ ಟ್ರಸ್ಟ್‌ನ ಹಿರಿಯ ಸದಸ್ಯರಾದ ಷಣ್ಮುಖಪ್ಪ ಕೇಲಗಾರ ಅಧ್ಯಕ್ಷತೆ ವಹಿಸಿದ್ದರು.

ನಾಗರಾಜ ಮುಂಡಾಸದ, ಬಸವ ರಾಜ ಹುಲ್ಲತ್ತಿ, ಬನಶಂಕರಿ ಸೀಡ್ಸ್ ಕಂಪನಿಯ ಲಕ್ಷ್ಮೀಕಾಂತ ಹುಲಗೂರು, ಅಶೋಲ ಹೊನ್ನತ್ತಿ, ವೀರೇಶ ಮುಂಡ ಸದ, ಮಂಜು ದೂಪದ್, ಗಣೇಶ ಹುಲ್ಲತ್ತಿ, ಬಸವರಾಜ ಹುಲ್ಲತ್ತಿ, ಮಂಜುನಾಥ ತಳವಾರ, ಸುರೇಶ ಕೋಟಿಮಠ, ವಿಶ್ವನಾಥ ಬಡಿಗೇರ, ಮಾಲತೇಶ ಹೊನ್ನತ್ತಿ, ರಾಜು ಮಡಿ ವಾಳರ, ಉಮೇಶ ಕೂನಬೇವು, ಬಿರೇಶ ಕಡ್ತಿಮಾಳರ, ಬಸವರಾಜ ಕರೇಗೌಡ್ರ, ಮೌನೇಶ ಬಡಿಗೇರ, ಹಾಲೇಶ ತಳವಾರ, ಮಲ್ಲಿಕಾರ್ಜುನ ಪಾಟೀಲ, ರೋಹಿತ್ ನಾಯ್ಕರ, ಹರೀಶ್, ಸಂಜೀವ, ಶಿವಲಿಂಗ, ನವೀನ್, ಗಂಗಾ ಧರ, ಕುಮಾರ, ಜಗದೀಶ, ವಾಗೀಶ, ಪ್ರಶಾಂತ, ಕೊಟ್ರೇಶ ಮತ್ತಿತರರು ಉಪಸ್ಥಿತರಿದ್ದರು. ಗೀತಾ ಪ್ರಾರ್ಥಿಸಿ ದರು. ಎಂ.ಸಿ. ಹಾವೇರಿ ನಿರೂಪಿಸಿ ದರು. ಕಾರ್ತಿಕ ಹಿರೇಮಠ ಸ್ವಾಗತಿಸಿ ದರು. ಗಣೇಶ ಹುಲ್ಲತ್ತಿ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry