ಸೋಮವಾರ, ಮೇ 23, 2022
21 °C

ಯುವಕಾಂಗ್ರೆಸ್ ಸಮಿತಿ: ಶೇ 80ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಯಲ್ಲಿ ಮೊದಲ ದಿನ ಶೇ 80ರಷ್ಟು ಮತದಾನ ಆಗಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 112 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಗುರುವಾರವೂ ಚುನಾವಣೆ ನಡೆಯಲಿದೆ.ಶಿವಾಜಿನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮತಗಟ್ಟೆಗೆ ತೆರಳಿದ ಚಿತ್ರ ನಟಿ ರಮ್ಯಾ ಬುಧವಾರ ಮತದಾನ ಮಾಡಿದರು.ವಿಳಂಬ: ಕನಕಪುರ ಕ್ಷೇತ್ರದಲ್ಲಿ ಮತದಾನ ಸ್ವಲ್ಪ ಕಾಲ ವಿಳಂಬವಾಯಿತು. ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಗೆ ಕಣದಲ್ಲಿ 14 ಅಭ್ಯರ್ಥಿಗಳಿದ್ದರೆ 11 ಮಂದಿಯ ಮತಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.

ಈ ವಿಚಾರದಲ್ಲಿ ಗೊಂದಲ ಉಂಟಾದ ಕಾರಣ, ಹೊಸದಾಗಿ 14 ಮಂದಿ ಅಭ್ಯರ್ಥಿಗಳ ಮತಪಟ್ಟಿಯನ್ನು ಮುದ್ರಣ ಮಾಡಿ ಚುನಾವಣೆ ನಡೆಸಲಾಯಿತು. ಸುಮಾರು ಎರಡೂವರೆ ಗಂಟೆ ವಿಳಂಬವಾಯಿತು.ಗುರುವಾರ ಚುನಾವಣೆ ಮುಗಿಯಲಿದ್ದು, ಸಂಜೆಯೇ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರದ ಸಮಿತಿಗಳ ಮತ ಎಣಿಕೆ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.