ಬುಧವಾರ, ಜನವರಿ 22, 2020
28 °C

ಯುವಕ ನಾಪತ್ತೆ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ತಮ್ಮ ಮಗ ಹಣಮಂತ ಹೆರಕಲ್‌ ನಾಪತ್ತೆಯಾಗಿದ್ದು, ಆತನನ್ನು ಮಹಾದೇವ ನಾಗಪ್ಪ ನಿಪ್ಪಾಣಿ ಎಂಬಾತ ಕೊಲೆ ಮಾಡಿರಬಹುದು ಎಂದು ಹಾವಪ್ಪ ಬಸಪ್ಪ ಹೆರಕಲ್‌ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.‘ನವೆಂಬರ್‌ 4ರಿಂದ ಹಣಮಂತ ನಾಪತ್ತೆಯಾಗಿದ್ದಾನೆ. ಈತನಿಗೆ ವಿಜಾ ಪುರದ ಯುವತಿಯೊಂದಿಗೆ ನಿಶ್ಚಿತಾರ್ಥ ವಾಗಿತ್ತು. ಶಂಕಿತ ಆರೋಪಿ ಮಹಾ ದೇವ ನಾಗಪ್ಪ ನಿಪ್ಪಾಣಿ ಈ ಯುವತಿಯ ಅಕ್ಕನ ಗಂಡನಿದ್ದು, ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಆತನೇ ತಮ್ಮ ಮಗನನ್ನು ಕೊಲೆ ಮಾಡಿ ಶವವನ್ನು ಎಲ್ಲಿಯಾದರು  ಎಸೆದಿರಬಹುದು ಎಂದು ಹಾವಪ್ಪ ದೂರಿನಲ್ಲಿ ತಿಳಿಸಿ ದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿಯ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮದ್ದಿನಖಣಿ ವಡ್ಡರ ಗಲ್ಲಿಯ ನಿವಾಸಿ ಜ್ಯೋತಿ ಅಶೋಕ ಜಾಲವಾದಿ (24) ಎಂಬ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು  ಪದ್ಮಾವತಿ ಅಶೋಕ ಜಾಲವಾದಿ ದೂರು ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಇಲ್ಲಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)