ಯುವಜನತೆ ದೇಶದ ಶಕ್ತಿ
ಧಾರವಾಡ: “ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಎಂದೂ ಹಪಹಪಿಸಿಲ್ಲ. ದೇಶ ರಕ್ಷಣೆ, ಯುವಕರ ಅಭಿವೃದ್ಧಿಯೇ ಕಾಂಗ್ರೆಸ್ ಗುರಿ. ಈ ದೇಶದ ಶಕ್ತಿಯೇ ಯುವ ಶಕ್ತಿ. ಎಲ್ಲ ಯುವಕರೂ ಒಂದಾಗಿ ದೇಶ ಕಟ್ಟೋಣ” ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಚಾಲಕ ಪದ್ಮಾಕರ ಗುರು ಹೇಳಿದರು.
ಇಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಮತಕ್ಷೇತ್ರದ ವ್ಯಾಪ್ತಿಯ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ದೀಪಕ ಚಿಂಚೋರೆ, ನಜೀರ ಅಹಮ್ಮದ್ ಬಳಬಟ್ಟಿ, ಹೇಮಂತ ಗುರ್ಲಹೊಸೂರ, ವೆಂಕ ಟೇಶ ರಾಯ್ಕರ್, ಮನೋಜ ಕರ್ಜಗಿ, ಪರಶುರಾಮ ಚುರಮರಿ, ವಸಂತ ಅರ್ಕಾಚಾರ, ಮರಿಗೌಡ ಪಾಟೀಲ ಉಪಸ್ಥಿತರಿದ್ದರು. ರಾಬರ್ಟ ದದ್ದಾಪುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಲೋಲಿ ಸ್ವಾಗತಿಸಿದರು. ಸಲೀಂ ಕರಡಿಗುಡ್ಡ ವಂದಿಸಿದರು.
ಬೀಡಿ ಕಾರ್ಮಿಕರಿಂದ ಸ್ವಾಗತ
ಧಾರವಾಡ: ಆಶ್ರಯ ಯೋಜನೆಯಡಿಯಲ್ಲಿ ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೀಡಿ ಕಾರ್ಮಿಕರಿಗೆ ಪ್ರತ್ಯೇಕವಾಗಿ 400 ಮನೆಗಳನ್ನು ವಿತರಿಸಲು ಮುಂದಾ ಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಧಾರವಾಡ ಜಿಲ್ಲಾ ಬೀಡಿ ಕಾರ್ಮಿಕರ ಯೂನಿಯನ್ ಸ್ವಾಗತಿಸಿದೆ.
ಆದರೆ ನಿಜವಾದ ಬೀಡಿ ಕಾರ್ಮಿಕರಿಗೆ ಮನೆ ನೀಡುವ ಮೂಲಕ ಅನ್ಯಾಯ ಸರಿಪಡಿಸಬೇಕು ಎಂದು ಜಿಲ್ಲಾ ಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ ಹಾಗೂ ಶಿರಾಜ ಅಹಮ್ಮದ ಕುಡಚಿವಾಲೆ ಅವರು 2005ರಲ್ಲಿ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರಿ ಸಂಘವನ್ನು ಹುಟ್ಟಿ ಹಾಕಿ, ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವುದಾಗಿ ನಿವೃತ್ತಿ ಹೊಂದಿದ ಸುಮಾರು 600 ಬೀಡಿ ಕಾರ್ಮಿಕರ ಸದಸ್ಯತ್ವ ಪಡೆದಿದ್ದರು.
ಸಂಘದ ಹೆಸರಿನಲ್ಲಿ ಹಾಗೂ ವೈಯಕ್ತಿಕವಾಘಿ ಹುಬ್ಬಳ್ಳಿಯ ದೇನಾ ಬ್ಯಾಂಕಿನಲ್ಲಿ ಎರಡು ಖಾತೆ ತೆರೆದಿದ್ದರು. ಈ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಜಮಾ ಆಗಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ. ಸೂಕ್ತ ತನಿಖೆ ನಡೆಸಬೇಕು ಎಂದು ಯೂನಿಯನ್ ಅಧ್ಯಕ್ಷ ಬಿ.ಎ.ಮುಧೋಳ, ಪ್ರಧಾನ ಕಾರ್ಯದರ್ಶಿ ದೇವಾನಂದ ಜಗಾಪುರ ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.