ಯುವಜನಾಂಗಕ್ಕೆ ಏಡ್ಸ್ ಅರಿವು ಅಗತ್ಯ

7

ಯುವಜನಾಂಗಕ್ಕೆ ಏಡ್ಸ್ ಅರಿವು ಅಗತ್ಯ

Published:
Updated:

ಕೋಟ (ಬ್ರಹ್ಮಾವರ): ಜನಜಾಗೃತಿ ಮೂಡಿಸುವ ಸಲುವಾಗಿ ಒಬ್ಬ ವಿದ್ಯಾರ್ಥಿಗೆ ಏಡ್ಸ್ ರೋಗದ ತೀವ್ರತೆ ಅರ್ಥವಾಗಬೇಕು. ಆತನಿಂದ ಪರಿಸರದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾದಲ್ಲಿ ಏಡ್ಸ್ ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಕೋಟ ಅಮೃತೇಶ್ವರೀ ದೇವಸ್ಥಾನ ಸಭಾಂಗಣದಲ್ಲಿ ಬುಧವಾರ ಕೋಟ ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ಏಡ್ಸ್ ಕುರಿತು ಬೃಹತ್ ರ್ಯಾಲಿ, ಬೀದಿ ನಾಟಕ, ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾನಸಿಕವಾಗಿ ದೃಢವಾಗಿ ನಿಂತು ಸಮಾಜದಲ್ಲಿರುವ ಅನೇಕ ಮಾರಕ ರೋಗಗಳನ್ನು ದೂರ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಏಡ್ಸ್ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮಡಿವಂತಿಕೆ ಬಿಟ್ಟು ನಾವೆಲ್ಲಾ ಒಟ್ಟಾಗಿ ಸೇರಿ ಏಡ್ಸ್ ಎಂಬ ಮಾರಕ ಕಾಯಿಲೆ ಹೊಡೆದೋಡಿಸುವುದಕ್ಕೆ ಕೈಜೋಡಿಸಬೇಕು ಎಂದು ಎಂದು ಅವರು ಹೇಳಿದರು.ಪ್ರಾಂಶುಪಾಲ ಪ್ರೊ.ರಾಜೇಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತಿ ಜೆ. ಶೆಟ್ಟಿ ಜಾಥಾಕ್ಕೆ  ಚಾಲನೆ ನೀಡಿದರು.

ಕೋಟ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್, ಡೆಪ್ಯುಟಿ ತಹಸೀಲ್ದಾರ್ ಸುಂದರ್, ಕಾಲೇಜು ಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಜಿ.ಪಂ.ಸದಸ್ಯೆ ಸುನೀತಾ ರಾಜಾರಾಂ, ತಾ.ಪಂ.ಸದಸ್ಯ ಭರತ್ ಕುಮಾರ್ ಶೆಟ್ಟಿ, ಕೋಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರ ಆಚಾರ್, ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿಗಳಾದ ಡಾ.ಉದಯಕುಮಾರ್ ಶೆಟ್ಟಿ, ಜ್ಯೋತಿಪ್ರಿಯಾ, ರೆಡ್ ರಿಬ್ಬನ್ ಕ್ಲಬ್ ಸಂಚಾಲಕ ಪ್ರೊ.ಕೃಷ್ಣಮೂರ್ತಿ ವೈ.ಆರ್, ಮಂಜುನಾಥ ಆಚಾರಿ, ಎನ್‌ಎಸ್‌ಎಸ್ ಘಟಕದ ನಾಯಕರಾದ ರಂಜಿತ್ ಕುಮಾರ್, ಪುಷ್ಪಾ, ರೂಪಾ ಸಿ.ಎಸ್, ರವೀಂದ್ರ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry