ಯುವಜನಾಂಗಕ್ಕೆ ಶಿಕ್ಷಣ, ಅವಕಾಶ ಅಗತ್ಯ

7

ಯುವಜನಾಂಗಕ್ಕೆ ಶಿಕ್ಷಣ, ಅವಕಾಶ ಅಗತ್ಯ

Published:
Updated:

ಮಂಗಳೂರು: `ಅತ್ಯಧಿಕ ಪ್ರಮಾಣದಲ್ಲಿ ಯುವ ಜನಾಂಗವನ್ನು ಹೊಂದಿರುವುದು ಭಾರತಕ್ಕೆ ಇರುವ ಅನುಕೂಲ ನಿಜ. ಆದರೆ ಅವರಿಗೆ ಸರಿಯಾದ ಶಿಕ್ಷಣ, ಸೂಕ್ತ ಅವಕಾಶ ಸಿಗದಿದ್ದಲ್ಲಿ ಈ ಸಿಂಹಪಾಲು ಜನಸಂಖ್ಯೆ ದೇಶಕ್ಕೆ ಲಾಭವಾಗುವ ಬದಲು ಶಾಪವಾಗುವ ಆತಂಕವಿದೆ~ ಎಂದು ನವದೆಹಲಿಯ ಡೇವಿಡ್ ಅಂಡ್ ಲುಸೈಲ್ ಪೆಕಾರ್ಡ್ ಪ್ರತಿಷ್ಠಾನದ ಕಂಟ್ರಿ ಅಡ್ವೈಸರ್ ವಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.ಎಸ್‌ಡಿಎಂ ನಿರ್ವಹಣಾ ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆ ಸ್ನಾತಕೋತ್ತರ ಕೇಂದ್ರ ಸೋಮವಾರ ಆಯೋಜಿಸಿದ್ದ `ಜಾಗತಿಕ ಮನೋಭೂಮಿಕೆ-ಸವಾಲು ಎದುರಿಸಲು ಯುವಕರನ್ನು ಸಜ್ಜುಗೊಳಿಸುವಿಕೆ~ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮಾಹಿತಿ ಪಡೆಯುವುದು ಕಷ್ಟವೇನಲ್ಲ. ಹಿಂದೆಂದಿಗಿಂತ ಹೆಚ್ಚು ಅವಕಾಶವಿದೆ. ಆದರೆ ನಮಗೇನು ಬೇಕು. ಮಾಹಿತಿಯ ಉಪಯೋಗವನ್ನು ಯಾವ ರೀತಿ ಪಡೆಯಬೇಕು ಎಂಬುದು ಮುಖ್ಯ~ ಎಂದು ಅವರು ಹೇಳಿದರು.`ಈಗ ಅವಕಾಶಗಳು ಹಿಂದಿಗಿಂತ ಹೆಚ್ಚು ಇವೆ. ಹೀಗಾಗಿ ಕನಸು ಕಾಣಲು ಸಾಧ್ಯವಿದೆ. ಅವಕಾಶಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ನಿರ್ಧರಿಸಬೇಕು. ತೀವ್ರ ಸ್ಪರ್ಧೆ ಈಗ ಎದುರಾಗಿರುವ ಇನ್ನೊಂದು ಸವಾಲು. ಆದರೆ ಸ್ಪರ್ಧೆ ಎದುರಿಸಲು ಒಳ್ಳೆಯ ಶಿಕ್ಷಣ ಅಗತ್ಯ~ ಎಂದು ಅವರು ಅಭಿಪ್ರಾಯಪಟ್ಟರು.ಗುಣಮಟ್ಟದ ಶಿಕ್ಷಣ: ಈಗ ದೇಶದ ಬಹುತೇಕ ಕಡೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಒಳ್ಳೆಯ ಶಿಕ್ಷಣದ ಅಡಿಪಾಯ ಇಲ್ಲದೇ ಹೋದರೆ ದೇಶದ ಆರ್ಥಿಕತೆಗೆ ಕೊಡುಗೆ ಸಾಧ್ಯವಾಗುವುದಿಲ್ಲ. ಕೆಲವೇ ನಗರಗಳನ್ನು ಬಿಟ್ಟರೆ ದೇಶದ ಬಹುತೇಕ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಸೇವೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಗಮನ ಸೆಳೆದರು.`ಭಾರತಕ್ಕೆ ಯುವ ಜನಸಂಖ್ಯೆಯ ದೊಡ್ಡ ಶಕ್ತಿ ಇದೆ. ಈ ಅನುಕೂಲ ವಿಶ್ವದ ಇತರ ರಾಷ್ಟ್ರಗಳಿಗೆ ಇಲ್ಲ. ಆದರೆ ಅಧಿಕ ಪ್ರಮಾಣದಲ್ಲಿರುವ ಯುವ ಸಮೂಹಕ್ಕೆ ಯಾವ ರೀತಿ ಅಗತ್ಯವಿರುವ ನೈಪುಣ್ಯ ಒದಗಿಸುತ್ತದೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ~ ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ಅನಿಲ್ ಅಭಿಪ್ರಾಯಪಟ್ಟರು.ಕಾರ್ಪೊರೇಷನ್ ಬ್ಯಾಂಕ್ ಅಧ್ಯಕ್ಷ-ಆಡಳಿತ ನಿರ್ದೇಶಕ ಅಜಯ್ ಕುಮಾರ್ ಸಮ್ಮೇಳನ ಉದ್ಘಾಟಿಸಿದರು. `ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ ಎಂದರು.ಆದರೆ ಕಾರ್ಯಕ್ಷಮತೆ ಸುಧಾರಿಸುವಲ್ಲಿ ತಂತ್ರಜ್ಞಾನದ ಲಾಭ ಬಳಸಬೇಕಿದೆ. ಇನ್ನು ಜಾಗತೀಕರಣದ ಹಿನ್ನೆಲೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ನಮ್ಮ ಗ್ರಾಹಕ ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದರು.`ನಮ್ಮಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಚಿಂತನೆಯಿದೆ. ಆದರೆ ಯಶಸ್ಸಿಗೆ ಧನ್ಮಾತ್ಮಕ ಮನೋಭಾವ ಬೇಕು. ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕು. ಪರಿಶ್ರಮ, ಪ್ರಾಮಾಣಿಕತೆ, ಕಾರ್ಯನಿಷ್ಠೆ ರೂಢಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು~ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಕೆ.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ದೇವರಾಜ್, ಫ್ಯಾಕಲ್ಟಿ ಸಂಚಾಲಕರಾದ ಪ್ರಮೀಳಾ ಶೆಟ್ಟಿ, ವಿದ್ಯಾರ್ಥಿ ಸಂಚಾಲಕರಾದ ಸುರಕ್ಷಾ ಜೈನ್, ಅರ್ಜುನ್ ಜಯಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry