ಮಂಗಳವಾರ, ಅಕ್ಟೋಬರ್ 22, 2019
26 °C

ಯುವಜನ ಮೇಳಗಳು ಸ್ಪರ್ಧೆಗೆ ಸೀಮಿತ ಬೇಡ

Published:
Updated:

ನಾಗಮಂಗಲ:  ಯುವಜನ ಮೇಳ ಗಳು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತ ವಾಗದೆ, ಪ್ರಸಕ್ತ ವ್ಯವಸ್ಥೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಯುವಕರು ಚಿಂತಿಸುವಂತೆ ಮಾಡುವ ವೇದಿಕೆ ಗಳಾಗಬೇಕು ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಶಿವಣ್ಣ ನುಡಿದರು.ಪಟ್ಟಣದ ಟಿ.ಬಿ. ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಯುವಜನ ಮೇಳಗಳು ನಾಡಿನ ಯುವ ಸಮೂಹವನ್ನು ಸುಶಿಕ್ಷಿತರ ನ್ನಾಗಿ ಮಾಡಬೇಕು. ಯುವ ಪೀಳಿಗೆ ಸೋಮಾರಿಗಳಾಗದೆ ದುಡಿಯುವ ಮನೋಭಾವ ಮೈಗೂಡಿಸಿ ಕೊಳ್ಳ ಬೇಕು. ಅಂತಹ ಚಿಂತನೆಗಳನ್ನು ಜಾಗೃತ ಗೊಳಿಸುವ ವೇದಿಕೆ ಕಲ್ಪಿಸಬೇಕು ಎಂದರು.ತಹಶೀಲ್ದಾರ್ ಜಗದೀಶ್ ಮಾತನಾಡಿ, ಯುವ ಪೀಳಿಗೆಯಲ್ಲಿ ನೈತಿಕ ಮೌಲ್ಯದ ಕೊರತೆಯಿದೆ. ತಂದೆ, ತಾಯಿ, ರಾಷ್ಟ್ರದ ಮೇಲೆ ಗೌರವ ಭಾವನೆ ಮೂಡಿಸಬೇಕಾದ ಅನಿ ವಾ ರ್ಯತೆ ಎದುರಾಗಿದೆ. ಯುವ ಕರನ್ನು ಸದ್ವಿಚಾರಕ್ಕೆ ತೆರೆದು ಕೊಳ್ಳು ವಂತೆ ಮಾಡಲು ಯುವಜನ ಮೇಳ ಗಳು ಇಂದು ಅವಶ್ಯಕವಾಗಿವೆ ಎಂದು ಹೇಳಿದರು.

ನಾಗಮಂಗಲ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ.ಕೃಷ್ಣ, ಪಟ್ಟಣ ಪಂಚಾಯಿತಿ ಸದಸ್ಯ ಗೋಪಾಲ್, ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಡಿ.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ವೇದಮೂರ್ತಿ, ಬೆಳ್ಳೂರಿನ ಮುಖಂಡ ಧರಣೇಂದ್ರ ಬಾಬು ಉಪಸ್ಥಿತರಿದ್ದರು.   

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)