ಶನಿವಾರ, ಜೂನ್ 19, 2021
28 °C

ಯುವಜನ ಸಾಲ ಶೇ25 ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಕಳೆದ 5 ವರ್ಷ­ಗಳಲ್ಲಿ ದೇಶದಲ್ಲಿನ ಯುವಜನರು ಬ್ಯಾಂಕ್‌­ಗಳಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸುತ್ತಿರುವ ಪ್ರಮಾಣದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.2008ರಲ್ಲಿ 30 ವರ್ಷಕ್ಕಿಂತ ಕೆಳಗಿ­ನವರಲ್ಲಿ ಕೇವಲ ಶೇ 7ರಷ್ಟು ಮಂದಿ ಮಾತ್ರ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮುಂದಾಗುತ್ತಿದ್ದರು. ಈಗ ಈ ವಯೋಮಿತಿಯವರಲ್ಲಿ ಶೇ 25 ರಷ್ಟು ಮಂದಿ ಬ್ಯಾಂಕ್‌ಗಳಿಗೆ ಸಾಲಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ ಎಂದು ಸಾಲ ಗಳ ಕುರಿತು ಮಾಹಿತಿ ನೀಡುವ ‘ಸಿಬಿಲ್‌’ ವರದಿ ತಿಳಿಸಿದೆ.ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿನ ಮಂದಗತಿ ಪ್ರಗತಿ (ಶೇ 5 ಜಿಡಿಪಿ) ಮತ್ತು ಉದ್ಯೋಗ ನಷ್ಟದ ಪರಿಣಾಮವೂ ಸಹ ಈ ವಯೋಮಿತಿ ಯವರು ಸಾಲ ಪಡೆಯುವುದರಲ್ಲಿ ಹೆಚ್ಚಳವಾಗುವಂತೆ ಮಾಡಿದೆ ಎಂದು ವರದಿ ವಿಶ್ಲೇಷಿಸಿದೆ. 40 ವರ್ಷಕ್ಕಿಂತ ಕೆಳಗಿನವರು ಮೊದಲ ಬಾರಿಗೆ ಬ್ಯಾಂಕ್‌ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಮಾಣ 2014ರಲ್ಲಿ ಶೇ 60ಕ್ಕೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.