ಯುವತಿಯರ ಕಳ್ಳಸಾಗಣೆ ಜಾಲ ಪತ್ತೆ

7

ಯುವತಿಯರ ಕಳ್ಳಸಾಗಣೆ ಜಾಲ ಪತ್ತೆ

Published:
Updated:

ತುಮಕೂರು: ಯುವತಿಯರು, ಮಹಿಳೆಯರ ಕಳ್ಳ ಸಾಗಣೆಯ ಬೃಹತ್ ಜಾಲ ಜಿಲ್ಲೆಯಲ್ಲಿ ಬೇರೂರಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಪೊಲೀಸರ ಕಾರ್ಯಾಚರಣೆಯಿಂದ ದೃಢಪಟ್ಟಂತಾಗಿದೆ.ಆದರೆ ಘಟನೆ ಸಂಬಂಧ ಈವರೆಗೂ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ತುಟಿ ಬಿಚ್ಚದೆ ಮೌನವಾಗಿರುವುದು ಅಚ್ಚರಿಯ ಜೊತೆಗೆ ಅನುಮಾನಕ್ಕೂ ಕಾರಣವಾಗಿದೆ.ತುಮಕೂರು ವಿದ್ಯಾರ್ಥಿನಿಯನ್ನು ಕಳ್ಳ ಸಾಗಣೆ ಮೂಲಕ ದೆಹಲಿಗೆ ಮಾರಾಟ ಮಾಡಲು ಹೋಗಿ ಚಿಂತಾಮಣಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಯನ್ನು ಈವರೆಗೂ ಇಲ್ಲಿನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾಗಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಮಹಿಳೆಯರು, ವಿದ್ಯಾರ್ಥಿ ನಿಯರು ನಾಪತ್ತೆ ಆಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೆ ಹೆಚ್ಚಿನ ಮಾಹಿತಿ ಸಿಗುತ್ತಿತ್ತು ಎನ್ನಲಾಗಿದೆ.ಜಿಲ್ಲೆಯಿಂದ ಎರಡು ದಿನಕ್ಕೆ ಒಬ್ಬರಂತೆ ಯುವತಿಯರು ನಾಪತ್ತೆ ಆಗುತ್ತಿರುವ ಕುರಿತು `ಪ್ರಜಾವಾಣಿ~ಯು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ವರದಿ ಮಾಡಿತ್ತು. ಯುವತಿಯರು, ಮಹಿಳೆ ಯರು ಕಳ್ಳ ಸಾಗಣೆ ಮೂಲಕ ವೇಶ್ಯಾವಾಟಿಕೆ ಕೇಂದ್ರಗಳಿಗೆ ಮಾರಾಟ ಮಾಡುವ ಜಾಲ ಜಿಲ್ಲೆ ಯಲ್ಲಿದೆ ಎಂಬುದನ್ನು ವರದಿ ಉಲ್ಲೇಖಿಸಿತ್ತು. ಆದರೆ ಇದನ್ನು ಅಲ್ಲಗಳೆದಿದ್ದ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಕಳ್ಳ ಸಾಗಣೆ ಸಣ್ಣ ಕುರುಹು ಕೂಡ ಜಿಲ್ಲೆಯಲ್ಲಿ ಇಲ್ಲ ಎಂದು ಹೇಳಿದ್ದರು. ಆದರೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿರುವ ಪ್ರಕರಣದಿಂದ ಜಿಲ್ಲೆಯಲ್ಲಿ ಕಳ್ಳಸಾಗಣೆ ಜಾಲದ ಬೆಳಕು ಚೆಲ್ಲಿದೆ.ಇದೇ ತಿಂಗಳು ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಯಲ್ಲಿ ದೂರು ದಾಖಲಾಗಿತ್ತು. ಮಧುಗಿರಿ, ತುಮಕೂರಿನಿಂದ ಇವರು ನಿಗೂಢವಾಗಿ ನಾಪತ್ತೆ ಯಾಗಿದ್ದರು. ಕಳ್ಳ ಸಾಗಣೆ ಜಾಲಕ್ಕೆ ಸಿಕ್ಕ ಈ ಇಬ್ಬರೂ ಕೂಡ ಅದೃಷ್ಟವಶಾತ್ ಪೊಲೀಸರ ನೆರವಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ.ಮಧುಗಿರಿಯ 8ನೇ ತರಗತಿ ವಿದ್ಯಾರ್ಥಿನಿ ಯನ್ನು ಸಿಹಿ ತಿಂಡಿ ನೀಡುತ್ತಾ ಗೆಳೆತನ ಸಂಪಾದಿಸಿ ಕೊಂಡಿದ್ದ ಮಹಿಳೆಯೊಬ್ಬಳು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಳು. ಆದರೆ ಈ ಮಹಿಳೆ ಯಾರಿಗೋ ದೂರವಾಣಿ ಮೂಲಕ ಕರೆ ಮಾಡಿ ಹುಡುಗಿ ಕರೆತಂದಿದ್ದು ಹಣ ತರುವಂತೆ ಹೇಳಿದ್ದನ್ನು ಕೇಳಿಸಿಕೊಂಡ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಅಂತಿಮವಾಗಿ ರೈಲ್ವೆ ಪೊಲೀಸರ ಸಹಾಯದಿಂದ ತುಮಕೂರು ಮಕ್ಕಳ ಕಲ್ಯಾಣ ಸಮಿತಿ ಸೇರಿದ ಈಕೆಯನ್ನು ಈಗ ಪೋಷಕರಿಗೆ ಒಪ್ಪಿಸಲಾಗಿದೆ.ಅತಿಯಾದ ಮೊಬೈಲ್ ಆಸೆ ಹೊಂದಿದ್ದ ತುಮಕೂರು ಖಾಸಗಿ ಕಾಲೇಜಿನಲ್ಲಿ ಮೊದಲ ಪಿಯುಸಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ನಿಯ ಸ್ನೇಹ ಸಂಪಾದಿಸಿಕೊಂಡ ವೆಂಕಟೇಶ್ ಎಂಬಾತ ಮೊಬೈಲ್ ಕೊಡಿಸುವುದಾಗಿ ಹೇಳಿ ಈಕೆಯನ್ನು ಬೆಂಗಳೂರು ಯಲಹಂಕದ ಬಳಿ ಕರೆದುಕೊಂಡು ಹೋಗುತ್ತಿದ್ದಾಗ ಚಿಂತಾಮಣಿ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಈಚೆಗೆ ಬಂಧಿಸಿದ್ದಾರೆ. ಈಕೆಯನ್ನು ಕೂಡ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಪೋಷಕರಿಗೆ ನೀಡಲಾಗಿದೆ.ಯುವತಿಯರ ಕಳ್ಳಸಾಗಣೆ ಜಾಲದಲ್ಲಿ ಆರೋಪಿ ವೆಂಕಟೇಶ್ ಇರುವ ಕುರಿತು ಅನು ಮಾನ ಇತ್ತು. ಮೊದಲಿನಿಂದಲೂ ಈತನ ಮೇಲೆ ಕಣ್ಣಿರಿಸಲಾಗಿತ್ತು. ಯಲಹಂಕದಲ್ಲಿ ತುಮಕೂರು ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗುತ್ತಿ ದ್ದಾಗ ಬಂಧಿಸಲಾಯಿತು. ಈ ಹುಡುಗಿಯನ್ನು ಕೂಡ ವಿಚಾರಣೆಗೆ ಒಳಪಡಿಸಿ ಕಳುಹಿಸಲಾಗಿದೆ ಎಂದು ಚಿಂತಾಮಣೆ ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಗಿರೀಶ್ `ಪ್ರಜಾವಾಣಿ~ಗೆ ತಿಳಿಸಿದರು.ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪ ಡಿಸಿದ್ದು ತನಿಖೆಗಾಗಿ ಮೂರು ದಿನ ದೆಹಲಿಗೂ ಕರೆದುಕೊಂಡು ಹೋಗಲಾಗಿತ್ತು. ಚಿತ್ರದುರ್ಗ, ಹಾಸನದ ಮೂವರು ಮಹಿಳೆಯರನ್ನು ವೇಶ್ಯಾವಾಟಿಕೆ ಕೇಂದ್ರವೊಂದಕ್ಕೆ ಮಾರಾಟ ಮಾಡಿದ್ದನು. ಆ ಮೂವರು ಮಹಿಳೆಯರನ್ನು ಅಲ್ಲಿಂದ ರಕ್ಷಣೆ ಮಾಡಲಾಗಿದೆ. ಕಳ್ಳ ಸಾಗಣೆ ಜಾಲದಲ್ಲಿ ದೆಹಲಿಯ ಒಬ್ಬ ಮಹಿಳೆ, ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬ ಇದ್ದಾನೆ. ಆದರೆ ಆ ಇಬ್ಬರು ಸಿಕ್ಕಿಲ್ಲ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು ವಿಚಾರಣೆ ಮುಂದುವರೆದಿದೆ ಎಂದು ಅವರು ಮಾಹಿತಿ ನೀಡಿದರು.ತುಮಕೂರಿನಲ್ಲಿ ಯುವತಿಯರು, ಮಹಿಳೆ ಯರ ನಾಪತ್ತೆ ಹಿಂದೆ ಈತನ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಸಿಲ್ಲ. ಇನ್ನು ವಿಚಾರಣೆ ನಡೆಯಬೇಕಾಗಿದೆ. ತುಮಕೂರು ಪೊಲೀಸರು ಆರೋಪಿಯನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರೆ ಹೆಚ್ಚಿನ ಮಾಹಿತಿ ಬೆಳಕಿಗೆ ಬರಬಹುದು ಎಂದರು.ಮಹಿಳೆಯರು, ವಿಶೇಷವಾಗಿ ವಿದ್ಯಾರ್ಥಿನಿ ಯರನ್ನು ಪುಸಲಾಯಿಸಿ, ಪ್ರೇಮದ ನಾಟಕವಾಡಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಸಂಬಂಧ ವಿದ್ಯಾರ್ಥಿನಿಯರ ಪೋಷಕರು ಮಕ್ಕಳಿಗೆ ಎಚ್ಚ ರಿಕೆ ನೀಡಬೇಕು. ಚಿಂತಾಮಣಿ ಪೊಲೀಸರ ಶ್ರಮಶಾಘ್ಲನೀಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್ ಹೇಳಿದರು.ಯುವತಿಯರನ್ನು ಕಳ್ಳ ಸಾಗಣೆ ಮಾಡಲಾಗು ತ್ತಿದೆ ಎಂಬ ಅನುಮಾನ ಮೊದಲಿನಿಂದಲೂ ಇತ್ತು. ಆದರೆ ಸರಿಯಾದ ದಾಖಲೆ ಸಿಗುವುದಿಲ್ಲ. ಕೆಲವು ಯುವತಿಯರು ಮಾರಾಟಗೊಂಡಿದ್ದ ವೇಶ್ಯಾವಾಟಿಕೆ ಕೇಂದ್ರಗಳಿಂದ ತಪ್ಪಿಸಿಕೊಂಡು ಬಂದಿದ್ದರೂ ಮರ್ಯಾದೆಗೆ ಅಂಜಿ, ಹೆದರಿ ಕೊಂಡು ಮಾಹಿತಿ ನೀಡುವುದಿಲ್ಲ ಎಂದು ತುಮ ಕೂರು ಸಾಂತ್ವನ ಕೇಂದ್ರದ ಸಾ.ಚಿ.ರಾಜ್‌ಕುಮಾರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry