ಬುಧವಾರ, ಏಪ್ರಿಲ್ 21, 2021
23 °C

ಯುವತಿಯರ ಕಳ್ಳಸಾಗಣೆ ವದಂತಿ: ಅಧಿಕಾರಿಗಳ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಯುವತಿಯರ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಮೂಲದ ಸ್ವಯಂಸೇವಾ ಸಂಸ್ಥೆಯೊಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ತಿರುಪ್ಪುರ್ ಪೊಲೀಸರು ಮಂಗಳವಾರ ಸಂಜೆ 10 ಯುವತಿಯರನ್ನು ವಶಕ್ಕೆ ತೆಗೆದುಕೊಂಡು, ಆನಂತರ ಬಿಡುಗಡೆ ಮಾಡಿದ ಘಟನೆ ವರದಿಯಾಗಿದೆ.ಪೊಲೀಸರು ಯುವತಿಯರನ್ನು ವಿಚಾರಣೆಗೆ ಒಳಪಡಿಸಿದ ನಂತರ ಇದು ತಪ್ಪು ಮಾಹಿತಿ ಎಂಬುದು ಸ್ಪಷ್ಟವಾಗಿದ್ದು, ಅವರನ್ನು ಬಿಡಲಾಯಿತು ಎಂದು ತಿರುಪ್ಪುರ್ ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈ- ಕೊಯಮತ್ತೂರು ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನಲ್ಲಿ ಯುವತಿಯರನ್ನು ಸಾಗಿಸಲಾಗುತ್ತಿದೆ ಎಂದು ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದು ಸುಳಿವು ನೀಡಿದ ಹಿನ್ನೆಲೆಯಲ್ಲಿ ತಿರುಪ್ಪುರ್ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದ ಯುವತಿಯರನ್ನು        ವಶಕ್ಕೆ ತೆಗೆದುಕೊಂಡರು.ಈ ಯುವತಿಯರು 16ರಿಂದ 25ರ ವಯೋಮಾನದಲ್ಲಿದ್ದು, ತಿರುಪ್ಪುರ್‌ನ ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ದಾಖಲೆ ತೋರಿಸಿದರು. ನಾಲ್ಕು ಜನರ ಬಳಿ ರೇಷನ್ ಕಾರ್ಡ್ ಸಹ ಇತ್ತು. ಕೆಲವರು ತಮ್ಮ ತಂದೆ-ತಾಯಿಯರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು. ಜೊತೆಗೆ ರಜೆಗಾಗಿ ಊರಿಗೆ ಹೋಗಿದ್ದಾಗಿ ಈ ಯುವತಿಯರು ತಿಳಿಸಿದರು. ಆನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.