ಯುವತಿ ಅಪಹರಣ ಯುವಕನ ಬಂಧನ

7

ಯುವತಿ ಅಪಹರಣ ಯುವಕನ ಬಂಧನ

Published:
Updated:

ನೆಲಮಂಗಲ: ಯುವತಿಯನ್ನು ಅಪಹರಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಂಧಿತ ಆರೋಪಿ ಕೊರಟಗೆರೆ ತಾಲ್ಲೂಕಿನ ಮಿಟ್ರಳ್ಳಿ ಗ್ರಾಮದ ಚಕ್ರವರ್ತಿ (21). ಈತ ಎರಡು ವರ್ಷಗಳಿಂದ ಪಟ್ಟಣದ ಖಾಸಗಿ ಟೈಲ್ಸ್ ಕಾರ್ಖಾ ನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಮೀಪದ ಉಣ್ಣಿಗೆರೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಮನೆಯ ಎದುರಿನ 17 ವರ್ಷದ ಯುವತಿಯನ್ನು ಕೆಲ ದಿನಗಳಿಂದ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ.ಅಪಹರಣಕ್ಕೊಳಗಾದ ಯುವತಿ ಪಟ್ಟಣದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಚಕ್ರವರ್ತಿ ಮದುವೆಯಾಗುವುದೆಂದು ನಂಬಿಸಿ ಪೋಷಕರಿಗೆ ತಿಳಿಯದಂತೆ ಅಪಹರಿಸಿಕೊಂಡು, ಬೆಂಗಳೂರು, ತುಮಕೂರು, ಕೇರಳ ಮತ್ತಿತರೆಡೆ ಸುತ್ತಾಡಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಸೆಪ್ಟೆಂಬರ್‌ 15ರಂದು ಕಾಲೇಜಿಗೆಂದು ತೆರಳಿದ ಯುವತಿ ಮನೆಗೆ ಬಾರದಿ ದ್ದರಿಂದ ಆತಂಕಗೊಂಡ ಪೋಷಕರು 16ರಂದು ಮಾದನಾಯ ಕನಹಳ್ಳಿಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.ಪೊಲೀಸರು ಆರೋಪಿಯನ್ನು ಮತ್ತು ಯುವತಿಯನ್ನು ಪತ್ತೆಹಚ್ಚಿ, ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಹೆಚ್ಚಿನ ವಿಚಾರಣೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರು ವುದಾಗಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry