ಯುವತಿ ಮೇಲೆ ಅತ್ಯಾಚಾರ: ವಿದೇಶಿ ಪ್ರಜೆ ಬಂಧನ

7

ಯುವತಿ ಮೇಲೆ ಅತ್ಯಾಚಾರ: ವಿದೇಶಿ ಪ್ರಜೆ ಬಂಧನ

Published:
Updated:

ಬೆಂಗಳೂರು: ಮಣಿಪುರ ಮೂಲದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಜಾನ್ಸನ್ ವಿ. ವಿಂಗಿಪೆರಿ (31) ಬಂಧಿತ ಆರೋಪಿ. ಆವಲಹಳ್ಳಿ ಸಮೀಪದ ಶ್ರೀರಾಮಲೇಔಟ್‌ನಲ್ಲಿ ವಾಸವಾಗಿದ್ದ ಆತ ಮೇ 13ರಂದು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ.

`2010ರ ಏಪ್ರಿಲ್‌ನಲ್ಲಿ ಫೇಸ್‌ಬುಕ್ ಮೂಲಕ ಗ್ರೇಸಿ ಎಂಬ ಮಣಿಪುರ ಮೂಲದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಜಾನ್ಸನ್, ಗ್ರೇಸಿ ಜತೆ ನಿರಂತರವಾಗಿ ಸಂಭಾಷಣೆ ಮಾಡುತ್ತಿದ್ದ. ಇದೇ ಮೇ 11ರಂದು ಗ್ರೇಸಿ, ತನ್ನ ಅತ್ತೆಯ ಜತೆ ನಗರಕ್ಕೆ ಬಂದಿದ್ದರು. ಈ ವಿಷಯ ತಿಳಿದ ಜಾನ್ಸನ್ ತನ್ನ ಮನೆಯಲ್ಲೇ ಉಳಿದುಕೊಳ್ಳುವಂತೆ ಅವರಿಗೆ ಬಲವಂತ ಮಾಡಿದ್ದ. ಅಂತೆಯೇ ಅವರಿಬ್ಬರೂ ಜಾನ್ಸನ್‌ನ ಮನೆಗೆ ಹೋಗಿದ್ದರು~ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಮನೆಯಿಂದ ನೀರು ತರುವ ನೆಪದಲ್ಲಿ ಗ್ರೇಸಿಯ ಅತ್ತೆಯನ್ನು ತನ್ನ ಜತೆ ಕರೆದೊಯ್ದಿದ್ದ ಜಾನ್ಸನ್, ಅವರ ಮೇಲೆ ಅತ್ಯಾಚಾರ ಎಸಗಿದ್ದ. ಅವರಿಬ್ಬರು ತುಂಬಾ ಸಮಯವಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರೇಸಿ, ಜಾನ್ಸನ್‌ನ ಮೊಬೈಲ್‌ಗೆ ಕರೆ ಮಾಡಿದ್ದರು. ಆತ ಕರೆ ಸ್ವೀಕರಿಸದಿದ್ದರಿಂದ ಅತ್ತೆಯ ಮೊಬೈಲ್‌ಗೂ ಕರೆ ಮಾಡಿದ್ದರು. ಅವರೂ ಕರೆ ಸ್ವೀಕರಿಸದಿದ್ದರಿಂದ ಅನುಮಾನಗೊಂಡ ಗ್ರೇಸಿ, ಪಕ್ಕದ ಮನೆಗೆ ಹೋದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಜಾನ್ಸನ್ ಮೇ 14ರಂದು ಅವರಿಬ್ಬರನ್ನು ವಿಮಾನದಲ್ಲಿ ಮುಂಬೈಗೆ ಕಳುಹಿಸಿದ್ದ. ಗ್ರೇಸಿ, ಮುಂಬೈನ ಆಸ್ಪತ್ರೆಯೊಂದರಲ್ಲಿ ಅತ್ತೆಗೆ ಚಿಕಿತ್ಸೆ ಕೊಡಿಸಿದಾಗ ಅತ್ಯಾಚಾರ ನಡೆದಿರುವುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಅವರು, ಮುಂಬೈನ ನೆರೂಲ್ ಠಾಣೆಯಲ್ಲಿ  ಮೇ 26ರಂದು ಪ್ರಕರಣ ದಾಖಲಿಸಿದರು. ಮುಂಬೈ ಪೊಲೀಸರು ಪ್ರಕರಣವನ್ನು ಆವಲಹಳ್ಳಿ ಠಾಣೆಗೆ ವರ್ಗಾಯಿಸಿದರು. ಈ ದೂರಿನ ಅನ್ವಯ ಆವಲಹಳ್ಳಿ ಹಾಗೂ ಕೆ.ಆರ್.ಪುರ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಜಾನ್ಸನ್‌ನನ್ನು ಭಾನುವಾರ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಜಾನ್ಸನ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry