ಯುವತಿ ಸ್ಥಿತಿ ಚಿಂತಾಜನಕ

7

ಯುವತಿ ಸ್ಥಿತಿ ಚಿಂತಾಜನಕ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): `ವಿದ್ಯಾರ್ಥಿನಿಯ ನಾಡಿ ಮಿಡಿತ ಮಂಗಳವಾರ ರಾತ್ರಿ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಆತಂಕವಾಗಿತ್ತು' ಎಂದು ವೈದ್ಯರು ತಿಳಿಸಿದ್ದಾರೆ.


`ವಿದ್ಯಾರ್ಥಿನಿಗೆ  ಕೃತಕ ಉಸಿರಾಟ ವ್ಯವಸ್ಥೆ ಮುಂದುವರಿಸಲಾಗಿದೆ. ಆಕೆಯ ದೇಹ ಸ್ಥಿತಿ ಗಂಭೀರವಾಗಿಯೇ ಇದೆ' ಎಂದೂ ಹೇಳಿದ್ದಾರೆ.ಕಾಂಗ್ರೆಸ್ ಪ್ರಮುಖರ ಸಭೆ: ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಂಟಾದ ಪರಿಸ್ಥಿತಿಯನ್ನು ಅವಲೋಕಿಸಲು ಕಾಂಗ್ರೆಸ್ ಪ್ರಮುಖರು ಬುಧವಾರ ಮತ್ತೊಮ್ಮೆ ಸಭೆ ಸೇರಿದ್ದರು.ಎಎಪಿ ಆರೋಪ:  `ತೋಮರ್ ಸಾವಿನ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುವ ಹುನ್ನಾರ ನಡೆದಿದೆ' ಎಂದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ದೂರಿದ್ದಾರೆ.ವರ್ಮಾ ಸಮಿತಿ ಸಭೆ: ಮಹಿಳೆಯ ಮೇಲಿನ ದೌರ್ಜನ್ಯ ತಡೆ ಕುರಿತಂತೆ ಈವರೆಗೆ  ಇ-ಮೇಲ್ ಮೂಲಕ 6,100 ಸಲಹೆಗಳು ಬಂದಿವೆ ಎಂದು ನ್ಯಾಯಮೂರ್ತಿ ವರ್ಮಾ

ಸಮಿತಿಯು ತಿಳಿಸಿದೆ.  ಬುಧವಾರ ಸಮಿತಿಯ ಮೊದಲ ಸಭೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry