ಭಾನುವಾರ, ಜುಲೈ 25, 2021
25 °C

ಯುವದಳಕ್ಕೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಂಗವಾದ ನೆಹರು ಯುವ ಕೇಂದ್ರ 2011-12ರ ಸಾಲಿಗಾಗಿ ರಾಷ್ಟ್ರೀಯ ಯುವದಳ ಯೋಜನೆ ಅಡಿ ಸ್ವಯಂ ಸೇವಕರ ಹುದ್ದೆಗೆ ಅರ್ಜಿ ಕರೆದಿದೆ. ಈ ತಿಂಗಳ 1ರಂದು 18 ವರ್ಷ ತುಂಬಿದ ಹಾಗೂ 25 ವರ್ಷ ಮೀರದ ವಿದ್ಯಾರ್ಥಿಗಳಲ್ಲದ ಯುವಜನರು ಅರ್ಜಿ ಸಲ್ಲಿಸಬಹುದು. ಕನಿಷ್ಠ ವಿದ್ಯಾರ್ಹತೆ ಪಿಯುಸಿ. ಆಯ್ಕೆಯಾದವರಿಗೆ ಮಾಸಿಕ ರೂ 2500 ಗೌರವಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 5. ಮಾಹಿತಿಗೆ: ನೆಹರು ಯುವಕೇಂದ್ರ, ಬೆಂಗಳೂರು ನಗರ ಜಿಲ್ಲೆ, ಬಿ 2,ಜಿಎಎಫ್ ಬ್ಲಾಕ್, 2ನೇ ಮಹಡಿ, ಕೈಗಾರಿಕಾ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ರಾಜಾಜಿನಗರ. ದೂ: 2350 4271. ಜಾಲತಾಣ: www.nyks.org ; www.yas.nic.in.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.