ಬುಧವಾರ, ಮೇ 12, 2021
23 °C

ಯುವಶಕ್ತಿಯೇ ಅತ್ಯಂತ ಪ್ರಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಸಮಯಪಾಲನೆ ವಿದ್ಯಾರ್ಥಿ ಜೀವನದಲ್ಲಿ ಮಹತ್ವ ಪಡೆದಿದೆ. ಸಮವಸ್ತ್ರ ಧರಿಸಿದರೆ ಸಾಲದು ಸಮಚಿತ್ತವೂ ಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ನಟರಾಜ್ ಅರಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪಟ್ಟಣದ ರೋಟರಿ ಸಭಾಭವನದಲ್ಲಿ ಮಂಗಳವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೆಡಾ, ಸಾಂಸ್ಕ್ರತಿಕ ಮತ್ತು ಎನ್.ಎಸ್.ಎಸ್. ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಮೃದು ಕೌಶಲ್ಯಗಳ ಅಭಿವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ಇಲಾಖೆ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂಗ್ಲೀಷ್ ಭಾಷಾ ಬಳಕೆಯ ಬಗ್ಗೆಯೂ ವಿಶೇಷ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಶೇಷಗಿರಿ ಮಾತನಾಡಿ, ವಿದ್ಯಾರ್ಥಿಗಳು ಪದವಿಯ ನಂತರ ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಪದವಿಗಳನ್ನು ಪಡೆಯಬೇಕು. ಕಾಲೇಜಿನಲ್ಲಿ ಬಿ.ಕಾಂ. ಬಿ.ಎಸ್ಸಿ ತರಗತಿ ಆರಂಭಿಸಲು ಕೊಠಡಿಗಳ ಕೊರತೆ ಇದೆ. ಕಾಲೇಜಿಗೆ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ 2.5 ಲಕ್ಷ ರೂಪಾಯು ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಮುಖಂಡ ವೆಂಕಸುಬ್ಬಯ್ಯ ಗ್ರಾ.ಪಂ. ಅಧ್ಯಕ್ಷ ಸಂತೋಷ್  ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣಗೌಡ ವಾರ್ಷಿಕ ವರದಿ ವಾಚಿಸಿದರು. ಪ್ರದೀಪ್ ಕುಮಾರ್ ಎನ್.ಎಸ್.ಎಸ್. ಘಟಕದ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರೆ, ಮಧುಕುಮಾರ್ ಮತ್ತು ವಿಕ್ರಮ್ ಕ್ರಮವಾಗಿ ಕ್ರೆಡೆ ಮತ್ತು ಸಾಂಸ್ಕ್ರತಿಕ ಚಟುವಟಿಕೆಯ ವಿವರ ನೀಡಿದರು. ಅಂತಿಮ ಬಿ.ಎ. ಮತ್ತು ಬಿ.ಬಿ.ಎಂ. ವಿದ್ಯಾರ್ಥಿನಿಯರಾದ ಸರ್ವಮಂಗಳಾ ಮತ್ತು ನಿರ್ಮಲಾ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿಗಳು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಗೆ ಭೇಟಿ ನೀಡಿ ಇಂಗ್ಲಿಷ್ ಪ್ರಾಧ್ಯಾಪಕಿ ಅನುಪಮ ಅವರ ಮಾರ್ಗದರ್ಶನದಲ್ಲಿ ಲಂಬಾಣಿಗಳ ಬಗ್ಗೆ ಹೊರತಂದ ಅಧ್ಯಯನ ಗ್ರಂಥವನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಾಲಕೃಷ್ಣ ಪ್ರಭು, ಸತ್ಯನಾರಾಯಣ, ರಂಗನಾಥ್, ಕಳಸಯ್ಯ, ಜಯಂತ್ ಮತ್ತಿತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.