ಯುವಿ ಶೀಘ್ರ ಗುಣಮುಖರಾಗಲಿ

7

ಯುವಿ ಶೀಘ್ರ ಗುಣಮುಖರಾಗಲಿ

Published:
Updated:

ಪರ್ತ್: ಭಾರತ ಕ್ರಿಕೆಟ್ ತಂಡದ ಆಟಗಾರರು `ಯುವರಾಜ್ ಸಿಂಗ್ ಶೀಘ್ರ ಗುಣಮುಖರಾಗಲಿ~ ಎಂದು ಪ್ರಾರ್ಥಿಸುತ್ತಿರುವುದಾಗಿ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.`ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವರಾಜ್ ಅಮೆರಿಕದಲ್ಲಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದು ತಿಳಿದಿದೆ. ಅವರು ಆದಷ್ಟು ಬೇಗನೇ ಗುಣಮುಖರಾಗಿ ತಂಡಕ್ಕೆ ಮರಳಲಿ ಎಂಬುದು ಎಲ್ಲರ ಹಾರೈಕೆ~ ಎಂದು ಸೆಹ್ವಾಗ್ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. `ಯುವರಾಜ್ ಅನಾರೋಗ್ಯವನ್ನು ಮೆಟ್ಟಿನಿಲ್ಲುತ್ತಾರೆಂಬ ವಿಶ್ವಾಸ ನನ್ನದು~ ಎಂದು ಆರಂಭಿಕ ಬ್ಯಾಟ್ಸ್‌ಮನ್ ಹೇಳಿದರು.ಬುಧವಾರದ ಪಂದ್ಯದ ಬಗ್ಗೆ ಮಾತನಾಡಿದ ಅವರು, `ಶ್ರೀಲಂಕಾ ವಿರುದ್ಧ ನಾನು ಕಣಕ್ಕಿಳಿಯುವೆ. ಸಚಿನ್ ತೆಂಡೂಲ್ಕರ್ ಅಥವಾ ಗೌತಮ್ ಗಂಭೀರ್‌ಗೆ ವಿಶ್ರಾಂತಿ ನೀಡಲಾಗುವುದು. 2015ರ ವಿಶ್ವಕಪ್‌ನ್ನು ಗುರಿಯಾಗಿಸಿ ನಾವು ರೊಟೇಶನ್ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry