ಮಂಗಳವಾರ, ಜೂನ್ 22, 2021
29 °C

ಯುವ ಒಲಿಂಪಿಕ್ಸ್‌ಗೆ ಯಶ್ವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಭಾರತದ ಯಶ್ವಿನಿ ಅವರು ಮುಂಬರುವ ಯುವ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದ್ದಾರೆ. ಯಶ್ವಿನಿ ಕುವೈತ್‌ನಲ್ಲಿ ನಡೆಯುತ್ತಿರುವ ಏಳನೇ ಏಷ್ಯನ್‌ ಶೂಟಿಂಗ್‌ ಚಾಂಪಿ ಯನ್‌ಷಿಪ್‌ನ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಈ ಅರ್ಹತೆ ಗಿಟ್ಟಿಸಿದರು.ಈ ವಿಭಾಗದಿಂದ ಸ್ಪರ್ಧಿಸಲು ಭಾರತದ ಒಬ್ಬ ಶೂಟರ್‌ಗೆ ಅವಕಾಶವಿತ್ತು. ಯುವ ಒಲಿಂಪಿಕ್ಸ್‌ ಚೀನಾದ ನಾನ್‌ಜಿಂಗ್‌ನಲ್ಲಿ ಆಗಸ್ಟ್‌ 16ರಿಂದ 28ರವರೆಗೆ ನಡೆಯಲಿದೆ. ಏರ್‌ ಪಿಸ್ತೂಲ್‌ ವಿಭಾಗದ ಕಂಚಿನ ಪದಕ ಭಾರತದವರೇ ಆದ ಮಲೈಕಾ ಗೊಯೆಲ್‌ ಪಾಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.