ಯುವ ಕಾಂಗ್ರೆಸ್‌ ಚುನಾವಣೆ ಮುಂದಕ್ಕೆ

7

ಯುವ ಕಾಂಗ್ರೆಸ್‌ ಚುನಾವಣೆ ಮುಂದಕ್ಕೆ

Published:
Updated:

ಬೆಂಗಳೂರು: ಮತಪತ್ರ ಮುದ್ರಣ­ದಲ್ಲಿನ ಲೋಪದ ಕಾರಣದಿಂದ ಯುವ ಕಾಂಗ್ರೆಸ್‌ನ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರವಾರು ಸಮಿತಿಗಳು ಹಾಗೂ ಪ್ರದೇಶ ಸಮಿತಿ ಪದಾಧಿಕಾರಿಗಳ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

ಸೋಮವಾರ ಮತ್ತು ಮಂಗಳ­ವಾರ ಯುವ ಕಾಂಗ್ರೆಸ್‌ ಸಮಿತಿಯ ಕೊನೆಯ ಹಂತದ ಚುನಾವಣೆ ನಡೆ­ಯಬೇಕಿತ್ತು, ಪ್ರದೇಶ ಯುವ ಕಾಂಗ್ರೆಸ್‌ ಸಮಿತಿಗೆ ಸ್ಪರ್ಧಿಸಿದ್ದ 50 ಅಭ್ಯರ್ಥಿಗಳಲ್ಲಿ 13 ಮಂದಿಯ ಕ್ರಮ­ಸಂಖ್ಯೆ ಮತ್ತು ಚಿಹ್ನೆ ಅದಲು ಬದಲಾ­ಗಿದ್ದವು. ಸೋಮ­ವಾರ ಬೆಳಿಗ್ಗೆ ಮತದಾನ ಆರಂಭವಾಗು­ತ್ತಿದ್ದಂ­ತೆಯೇ ಮತಪತ್ರದಲ್ಲಿ ಲೋಪಗ­ಳಿರುವು­ದು ಬಹಿರಂಗವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry